Advertisement

PCB: ‘ನಮ್ಮ ಕ್ರಿಕೆಟ್‌ ಐಸಿಯುನಲ್ಲಿದೆ’ ಎಂದ ಪಾಕಿಸ್ತಾನದ ಮಾಜಿ ನಾಯಕ

09:34 AM Oct 04, 2024 | Team Udayavani |

ಇಸ್ಲಾಮಾಬಾದ್:‌ ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ದ ತವರಿನಲ್ಲಿ ಸರಣಿ ಸೋಲು ಕಂಡ ಪಾಕಿಸ್ತಾನ ಕ್ರಿಕೆಟ್ ನ (Pakistan Cricket) ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸೀಮಿತ ಮಾದರಿ ಕ್ರಿಕೆಟ್‌ ನ ನಾಯಕರಾಗಿದ್ದ ಬಾಬರ್‌ ಅಜಂ (Babar Azam) ಅವರು ಬುಧವಾರ ರಾಜೀನಾಮೆ ನೀಡಿದ್ದು, ಪಾಕಿಸ್ತಾನಿ ಕ್ರಿಕೆಟ್‌ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತಷ್ಟು ಜಗಜ್ಜಾಹೀರಾಗಿದೆ.

Advertisement

ಮೇಲಧಿಕಾರಿಗಳ ಸತತ ಬದಲಾವಣೆ ಮತ್ತು ಕ್ರೀಡೆಯಲ್ಲಿ ಸ್ವಜನಪಕ್ಷಪಾತವು ನುಸುಳಿದೆ ಎಂಬ ಆರೋಪಗಳಿವೆ. ಮಂಗಳವಾರ ಮಧ್ಯರಾತ್ರಿಯ ಸಮಯದಲ್ಲಿ ಬಾಬರ್ ಅಜ ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮದಲ್ಲಿ ರಾಜೀನಾಮೆ ಘೋಷಿಸಿದರು. ಇದಾಗಿ 12 ಗಂಟೆಗಳ ನಂತರ ಅಧಿಕೃತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿಕೆ ನೀಡಿದೆ.

ಪಾಕಿಸ್ತಾನ ಕ್ರಿಕೆಟ್ ಕಳೆದ ಎರಡು ವರ್ಷಗಳಲ್ಲಿ ನಾಲ್ವರು ತರಬೇತುದಾರರು, ಮೂವರು ಬೋರ್ಡ್ ಮುಖ್ಯಸ್ಥರು ಮತ್ತು ನಾಲ್ವರು ನಾಯಕರನ್ನು ಕಂಡಿದೆ. ಅದೇ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವೂ ಕುಸಿತ ಕಂಡಿದೆ.

“ಇದು ನಾಯಕತ್ವದ ಬಿಕ್ಕಟ್ಟು” ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಟೀಕೆ ಮಾಡಿದ್ದಾರೆ. “ಪಾಕಿಸ್ತಾನ ಕ್ರಿಕೆಟ್ ಐಸಿಯುನಲ್ಲಿದೆ, ಚಿಕಿತ್ಸೆಗಾಗಿ ತಜ್ಞರಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವರ್ಷದ ನವೆಂಬರ್‌ ನಲ್ಲಿ ನಡೆದ ಏಕದಿನ ವಿಶ್ವಕಪ್‌ ನಿಂದ ಪಾಕಿಸ್ತಾನದ ಆರಂಭಿಕ ನಿರ್ಗಮನದ ನಂತರ ಬಾಬರ್‌ ಅಜಂ ಅವರು ಎಲ್ಲಾ ಮೂರು ಸ್ವರೂಪಗಳಿಗೆ ರಾಜೀನಾಮೆ ನೀಡಿದ್ದರು. ಆದರೆ ಕಳೆದ ಮಾರ್ಚ್‌ನಲ್ಲಿ ವೈಟ್-ಬಾಲ್ ತಂಡಗಳ ನಾಯಕತ್ವಕ್ಕೆ ಮರಳಿದರು. ಆದರೆ ಕೇವಲ ಆರು ತಿಂಗಳುಗಳ ಬಳಿಕ ರಾಜೀನಾಮೆ ನೀಡಿದ್ದಾರೆ. ನಾಲ್ಕು ಪ್ರಮುಖ ಸರಣಿಗಳು ಮತ್ತು ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಇದ್ದರೂ ಬಾಬರ್‌ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next