Advertisement

ವಿಶ್ವಕಪ್ ಆಡುವ ಮೊದಲು ಸರ್ಕಾರದ ಅನುಮತಿ ಅಗತ್ಯ: ಪಾಕಿಸ್ತಾನ ಕ್ರಿಕೆಟ್ ಮಂಡಳಿ

06:42 PM Jun 27, 2023 | Team Udayavani |

ಮುಂಬೈ: ವಿಶ್ವಕಪ್‌ ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸುವ ಮೊದಲು ಸರ್ಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ.

Advertisement

ಮಂಗಳವಾರ ಮುಂಬೈನಲ್ಲಿ ವಿಶ್ವಕಪ್‌ ನ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಈ ಪ್ರತಿಕ್ರಿಯೆ ಬಂದಿದೆ. ವಿಶ್ವಕಪ್ ಕಾರ್ಯಕ್ರಮದಲ್ಲಿ ಪಿಸಿಬಿ ಯ ವಿನಂತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ದೂರಿದೆ.

“ಪಂದ್ಯದ ಸ್ಥಳಗಳು ಸೇರಿದಂತೆ ಭಾರತದ ಯಾವುದೇ ಪ್ರವಾಸಕ್ಕಾಗಿ ಪಿಸಿಬಿಗೆ ಪಾಕಿಸ್ತಾನ ಸರ್ಕಾರದಿಂದ ಅನುಮತಿ ಅಗತ್ಯವಿದೆ” ಎಂದು ಪಾಕಿಸ್ತಾನ ಮಂಡಳಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಮಾರ್ಗದರ್ಶನವನ್ನು ಪಡೆಯಲು ನಾವು ನಮ್ಮ ಸರ್ಕಾರದೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಅವರಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ಬಳಿಕ ನಾವು ಸಂಘಟಕರಿಗೆ (ಐಸಿಸಿ) ಅದನ್ನು ತಿಳಿಸುತ್ತೇವೆ. ಒಂದೆರಡು ವಾರಗಳ ಹಿಂದೆ ಐಸಿಸಿ ಕರಡು ಪಟ್ಟಿ ಹಂಚಿಕೊಂಡಾಗ ನಾವು ನಮ್ಮ ಅಭಿಪ್ರಾಯವನ್ನು ಕೇಳಿದ್ದರು” ಎಂದು ವಕ್ತಾರರು ಹೇಳಿದರು.

ಏನೇ ತಕರಾರುಗಳು ಇದ್ದರೂ, ಪಾಕಿಸ್ತಾನ ತಂಡವು ಭಾರತಕ್ಕೆ ಪ್ರಯಾಣಿಸುವ ವಿಶ್ವಾಸವಿದೆ ಎಂದು ಐಸಿಸಿ ಮತ್ತು ಬಿಸಿಸಿಐನ ಮೂಲಗಳು ತಿಳಿಸಿವೆ.

Advertisement

ಅಹಮದಾಬಾದ್‌ ನಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಿಸಿದಂತೆ ಪಿಸಿಬಿಯ ಆಕ್ಷೇಪಣೆ ಸಲ್ಲಿಸಿತ್ತು. ಅಹಮದಾಬಾದ್ ಬದಲಿಗೆ ಚೆನ್ನೈ ಅಥವಾ ಬೆಂಗಳೂರಿನಲ್ಲಿ ಆಡುವ ಆಸೆ ವ್ಯಕ್ತಪಡಿಸಿದ್ದರು. ಅಲ್ಲದೆ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ತಮ್ಮ ಪಂದ್ಯಗಳನ್ನು ಬದಲಾಯಿಸಲು ಬಯಸಿದ್ದರು. ಪ್ರಸ್ತುತ ಈ ಪಂದ್ಯಗಳು ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಿಗದಿಯಾಗಿದೆ.

ಪಾಕಿಸ್ತಾನವು ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಅವರ ಎದುರಾಳಿಗಳು ಭಾರತವಾಗಿದ್ದರೂ ಸಹ, ಅವರ ಪಂದ್ಯವನ್ನು ಕೋಲ್ಕತ್ತಾದಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಮತ್ತು ಐಸಿಸಿ ಸ್ಪಷ್ಟಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next