ಕೋಲ್ಕತಾ: ಪಶ್ಚಿಮ ಬಂಗಾಲದ ವಾಯುಮಾಲಿನ್ಯದಲ್ಲಿ ಶೇ. 51ರಷ್ಟು ಪಾಲು ಗಡಿಯಾಚೆಗಿನದ್ದಾಗಿದ್ದು, ಇದರಲ್ಲಿ ಶೇ. 21ರಷ್ಟು ಬಾಂಗ್ಲಾದೇಶದ್ದಾಗಿದೆ ಎಂದು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿಯ ಐಐಟಿ ನಡೆಸಿದ ಅಧ್ಯಯನದಲ್ಲೂ ಈ ಅಂಶ ಪತ್ತೆಯಾಗಿದ್ದು, ಕೋಲ್ಕತಾ ಸಹಿತ ಕೆಲವು ಜಿಲ್ಲೆಗಳ ವಾಯುಮಾಲಿನ್ಯಕ್ಕೆ ಗಡಿಯಾಚೆಯಿಂದ ಬರುವ ಮಾಲಿನ್ಯವೇ ಕಾರಣವಾಗಿದೆ ಎಂದು ತಿಳಿದು ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ದಿಲ್ಲಿ ಐಐಟಿ ನಡೆಸಿರುವ ಅಧ್ಯಯನದ ಪ್ರಾಥಮಿಕ ವರದಿಗಳು ಕೈಸೇರಿದ್ದು, ಇದರಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪರಿಸರವಾದಿಗಳು ಇದನ್ನು ಸಂಪೂರ್ಣವಾಗಿ ಒಪ್ಪವುದಿಲ್ಲ.
ಇದನ್ನೂ ಓದಿ:ವಿದ್ಯುತ್ ಪರಿವರ್ತಕಬದಲು ಹೆಸ್ಕಾಂಗೆ ಸುನೀಲ್ ತಾರೀಪು
ರಾಜ್ಯದ ರಸ್ತೆ ಸ್ಥಿತಿಗತಿ,ವಾಹನದಟ್ಟಣೆ, ತ್ಯಾಜ್ಯ ಸುಡುವುದು, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನ ಕೇಂದ್ರಗಳು ಮುಂತಾದವು ವಾಯುಮಾಲಿನ್ಯದ ಪ್ರಮುಖ ಕಾರಣಗಳಾಗಿವೆ ಎಂದು ಪರಿಸರವಾದಿ ಸೋಮೇಂದ್ರ ಮೋಹನ್ ಘೋಷ್ ಅವರು ಹೇಳುತ್ತಿದ್ದಾರೆ.