Advertisement

ಪಿಸಿಬಿ ಗುತ್ತಿಗೆ: ಮಲಿಕ್‌, ಹಫೀಜ್‌ಗೆ ಜಾಗವಿಲ್ಲ

09:18 AM Aug 09, 2019 | Team Udayavani |

ಕರಾಚಿ: ಮುಂದಿನ ಒಂದು ವರ್ಷ ಕಾಲ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಪಾಕಿಸ್ಥಾನ ತಂಡವನ್ನು ಪ್ರತಿನಿಧಿಸುವ ಆಟಗಾರರನ್ನು ಮಾತ್ರ ಕೇಂದ್ರೀಯ ಗುತ್ತಿಗೆಗೆ ಪರಿಗಣಿಸಲಾಗುತ್ತದೆ ಎಂದು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಸ್ಪಷ್ಟಪಡಿಸಿದೆ. ಶೋಯಿಬ್‌ ಮಲಿಕ್‌ ಮತ್ತು ಮೊಹಮ್ಮದ್‌ ಹಫೀಜ್‌ ಅವರನ್ನು ಗುತ್ತಿಗೆಯಿಂದ ಕೈಬಿಟ್ಟಿದೆ.

Advertisement

2019-20ರ ಋತುವಿನ ಕೇಂದ್ರೀಯ ಗುತ್ತಿಗೆಗೆ ಆಯ್ಕೆಯಾದ ಕ್ರಿಕೆಟಿಗರ ಪಟ್ಟಿಯನ್ನು ಪಿಸಿಬಿ ಗುರುವಾರ ಪ್ರಕಟಿಸಿದೆ. ಇದನ್ನು ಮೂರು ವಿಭಾಗಗಳನ್ನಾಗಿ (ಎ, ಬಿ ಮತ್ತು ಸಿ) ವಿಂಗಡಿಸಲಾಗಿದೆ. ಹಾಗೆಯೇ ಈ ವರ್ಷದಿಂದ ಕ್ರಿಕೆಟಿಗರ ಸಂಖ್ಯೆಯನ್ನು 33ರಿಂದ 19ಕ್ಕೆ ಕಡಿತ ಮಾಡಲಾಗಿದೆ.

“ಎ’ ವಿಭಾಗದಲ್ಲಿ ಪ್ರಮುಖರು
ಪಾಕಿಸ್ಥಾನ ತಂಡದ ನಾಯಕ ಸರ್ಫಾರಾಜ್ ಅಹ್ಮದ್‌, ಸ್ಟಾರ್‌ ಬ್ಯಾಟ್ಸ್‌ಮನ್‌ ಬಾಬರ್‌ ಅಜಂ ಮತ್ತು ಟೆಸ್ಟ್‌ ಸ್ಪಿನ್ನರ್‌ ಯಾಸಿರ್‌ ಶಾ ಅವರನ್ನು “ಎ’ ವಿಭಾಗದಲ್ಲಿ ಸೇರಿಸಲಾಗಿದೆ.

“ಮೂರೂ ವಿಭಾಗಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿರುವ ಕ್ರಿಕೆಟಿಗರ ಆರ್ಥಿಕ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗುವುದು. ಇದು ಹಾಲಿ ಒಪ್ಪಂದಕ್ಕಿಂತ ಅಧಿಕವಾಗಿರುತ್ತದೆ’ ಎಂದು ಪಿಸಿಬಿ ಆಡಳಿತ ನಿರ್ದೇಶಕ ವಾಸಿಂ ಖಾನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next