Advertisement

ಪಾಕ್‌-ಲಂಕಾ: ಲಾಹೋರ್‌ನಲ್ಲಿ ಏಕದಿನ

07:10 AM Sep 10, 2017 | Team Udayavani |

ಕರಾಚಿ: ಶ್ರೀಲಂಕಾ ವಿರುದ್ಧದ ತವರಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು ಪಿಸಿಬಿ ಶನಿವಾರ ಪ್ರಕಟಿಸಿದೆ. ಈ ಸರಣಿ ವೇಳೆ 2 ಟೆಸ್ಟ್‌, 5 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಲಾಗುವುದು.

Advertisement

ಅಚ್ಚರಿಯೆಂದರೆ, 3ನೇ ಟಿ-20 ಪಂದ್ಯವನ್ನು ಲಾಹೋರ್‌ನಲ್ಲಿ ಆಡಿಸಲು ನಿರ್ಧರಿಸಿದ್ದು. ಸರಣಿಯ ಉಳಿದೆಲ್ಲ ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. 2009ರ ಪಾಕ್‌ ಪ್ರವಾಸದ ವೇಳೆ ಲಾಹೋರ್‌ನಲ್ಲೇ ಶ್ರೀಲಂಕಾ ತಂಡದ ಬಸ್ಸಿನ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು.

ಟೆಸ್ಟ್‌ ಸರಣಿ ಸೆ. 28ರಿಂದ ಅಬುದಾಭಿಯಲ್ಲಿ ಆರಂಭವಾಗಲಿದೆ. ದ್ವಿತೀಯ ಟೆಸ್ಟ್‌ ಪಂದ್ಯ ದುಬಾೖಯಲ್ಲಿ ಹೊನಲು ಬೆಳಕಿನಲ್ಲಿ ಸಾಗಲಿದೆ (ಅ. 6-10).

Advertisement

Udayavani is now on Telegram. Click here to join our channel and stay updated with the latest news.

Next