Advertisement
670 ಮಂದಿಗೆ ಅನುಕೂಲಮಂಗಳೂರು ಟೆಲಿಕಾಂ ವೃತ್ತದಡಿಯ ದ.ಕ., ಉಡುಪಿ ಜಿಲ್ಲೆಗಳ 500 ಮಂದಿ ಹಾಗೂ ಕಾರವಾರ ಭಾಗದ 170 ಮಂದಿ ಸೇರಿ 670 ಕಾರ್ಮಿಕರಿಗೆ ಹಣ ಪಾವತಿಯಾಗಿದೆ. ಮೊದಲ ಹಂತವಾಗಿ 72 ಲಕ್ಷ ರೂ.ಗಳನ್ನು ತುರ್ತಾಗಿ ಬಿಡುಗಡೆಗೊಳಿಸಿದೆ. ಇನ್ನುಳಿದ ಕಾರ್ಮಿಕರನ್ನು ಎರಡನೇ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಬಾಕಿ ವೇತನವನ್ನು ಹಂತಹಂತವಾಗಿ ನೀಡುವ ಬಗ್ಗೆ ಬಿಎಸ್ಸೆನ್ನೆಲ್ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಅವಿಭಜಿತ ದ.ಕ. ಜಿಲ್ಲೆ ಮಂಗಳೂರು ಟೆಲಿಕಾಂ ವೃತ್ತ ವ್ಯಾಪ್ತಿಯಲ್ಲಿ 1,100ಕ್ಕೂ ಅಧಿಕ ಮಂದಿ ಗುತ್ತಿಗೆ ಕಾರ್ಮಿಕರಾಗಿ ವಿವಿಧ ಹುದ್ದೆಗಳಲ್ಲಿ ಖಾಯಂ ನೌಕರರಿಗೆ ಸಮನಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಿಎಸ್ಸೆನ್ನೆಲ್ ಆರ್ಥಿಕ ನಷ್ಟಕ್ಕೆ ಒಳಗಾದ ಸಂದರ್ಭ ಈ ವಲಯದ ಗುತ್ತಿಗೆ ಕಾರ್ಮಿಕರಿಗೆ ಕೆಲಸ ನಿರಾಕರಿಸಲಾಗಿತ್ತು. ಆಗ 14 ತಿಂಗಳ ವೇತನ ಬಾಕಿ ಇತ್ತು. ಲಾಕ್‌ಡೌನ್ ಬಳಿಕವಂತೂ ಆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿಪಿತ್ತು. ಈ ಬಗ್ಗೆ ಎ. 16ರಂದು ಉದಯವಾಣಿ ಕಾರ್ಮಿಕರ ಸಂಕಷ್ಟದ ಬದುಕಿನ ಬಗ್ಗೆ ಚಿತ್ರಣದ ವರದಿ ಪ್ರಕಟಿಸಿತ್ತು. ಸುದ್ದಿ ಪ್ರಕಟಗೊಂಡ ಮರುದಿನವೇ ಕಾರ್ಮಿಕರಿಗೆ ವೇತನ ಪಾವತಿಯಾಗಿದೆ. ಕಾರ್ಮಿಕರು ಕಷ್ಟ ಕಾಲದಲ್ಲಿ ವೇತನ ದೊರಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.