Advertisement

UAE ತೈಲ ಖರೀದಿಗೆ ರೂಪಾಯಿಯಲ್ಲಿ ಪಾವತಿ

12:56 AM Aug 16, 2023 | Team Udayavani |

ಹೊಸದಿಲ್ಲಿ: ಯುಎಇಯಿಂದ ಕಚ್ಚಾ ತೈಲ ಖರೀದಿ ಸಂದರ್ಭದಲ್ಲಿ ರೂಪಾಯಿ ಮೂಲಕ ಪಾವತಿ ಆರಂಭಿಸಲಾಗಿದೆ. ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಈ ನಿರ್ಧಾರ ಮಹತ್ವದ್ದಾಗಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಅಬುಧಾಬಿ ನ್ಯಾಶನಲ್‌ ಆಯಿಲ್‌ ಕಂಪೆನಿಗೆ 12.82 ಕೋಟಿ ರೂ. ಮೊತ್ತವನ್ನು ಪಾವತಿ ಮಾಡಿದೆ ಎಂದು ದುಬೈಯಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

Advertisement

ಇದೇ ಮೊದಲ ಬಾರಿಗೆ ಎರಡು ದೇಶಗಳ ನಡುವೆ ರೂಪಾಯಿ ಮೂಲಕ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. ಈ ಸಂಬಂಧ ಕಳೆದ ತಿಂಗಳು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದುವರೆಗೆ ಅಮೆರಿಕನ್‌ ಡಾಲರ್‌ನಲ್ಲಿ ವ್ಯವಹಾರ ನಡೆಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next