Advertisement
ಈ ಸಂದರ್ಭ ನೂರಾರು ಮಂದಿ ಭಕ್ತರು ಮೆರವಣಿಗೆಯ ಮೂಲಕ ದೇವರಿಗೆ ಹಸಿರು ಹೊರೆಕಾಣಿಕೆ ಅರ್ಪಿಸಿದರು .ದೇಗುಲದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುರೇಶ್ ಬಿ.ಶೆಟ್ಟಿ ಮತ್ತು ಕೆ.ವಿಜಯ್ ಕುಮಾರ್ ಅಡಿಗ, ಅಧ್ಯಕ್ಷ ಎಚ್.ಶಂಕರ್ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿಗೆ„ನಾಡಿ, ಪ್ರಸನ್ನ ಕುಮಾರ್ ಶೆಟ್ಟಿ, ಅರ್ಚಕ ಮತ್ತು ಕಾರ್ಯದರ್ಶಿಗಳಾದ ವೇದಮೂರ್ತಿ ಶ್ರೀಪತಿ ಭಟ್ ಕೋಶಾಧಿಕಾರಿ ನರೇಂದ್ರ ಶೆಟ್ಟಿ, ಜಂಟಿ ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ದೇಗುಲದಲ್ಲಿ ಜ.18ರಂದು ಗುರುಗಣೇಶ ಪೂಜೆ, ಬೆಳಿಗ್ಗೆ 11.10ಕ್ಕೆ ಉದ್ಭವ ಗಣಪತಿ ಬಿಂಬಕ್ಕೆ ಜೀವ ಕುಂಭಶೇಚನ, ಅಷ್ಟಬಂಧಲೇಪನ, ನ್ಯಾಸಾದಿಗಳು, ಪ್ರತಿಷ್ಠಾಕಲಶಾಭಿಷೇಕ, ತತ್ವಕಲಶ, ಮಹಾಪೂಜೆ ಸಂಜೆ 5.30ರಿಂದಏಕೋತ್ತರ ತ್ರಿಂಶತ ಕಲಶಸಹಿತ ಬ್ರಹ್ಮ ಕುಂಭ ಸ್ಥಾಪನೆ ನಡೆಯಲಿದೆ.