Advertisement

ʼKantara Chapter 1ʼನಲ್ಲಿ ನನ್ನನ್ನು ಸೇರಿಸಿಕೊಳ್ಳಿ..ರಿಷಬ್‌ ಶೆಟ್ಟಿಗೆ ಖ್ಯಾತ ನಟಿಯ ಮನವಿ

11:35 AM Dec 13, 2023 | Team Udayavani |

ಬೆಂಗಳೂರು: ರಿಷಬ್‌ ಶೆಟ್ಟಿ ಅವರ ʼಕಾಂತಾರ ಪ್ರೀಕ್ವೆಲ್‌ʼ ಇತ್ತೀಚೆಗೆ ಫಸ್ಟ್‌ ಲುಕ್‌ ರಿಲೀಸ್‌ ಮಾಡಿ ಸುದ್ದಿಯಲ್ಲಿದೆ. ಸದ್ಯ ಸಿನಿಮಾಕ್ಕಾಗಿ ಅಡಿಷನ್‌ ನಡೆಯಲಿದ್ದು, ಕಲಾವಿದರ ಆಯ್ಕೆಗಾಗಿ ಚಿತ್ರತಂಡ ಎದುರು ನೋಡುತ್ತಿದೆ.

Advertisement

ʼಕಾಂತಾರʼ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ಹೇಳಿದೆ. ಸಿನಿಮಾದಲ್ಲಿ ನಟಿಸಲು 30 ರಿಂದ 60 ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. ಇನ್ನು 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ರಿಷಬ್‌ ಶೆಟ್ಟಿ ಪೋಸ್ಟ್‌ ನಲ್ಲಿ ಹೇಳಿದ್ದಾರೆ. ನೋಂದಣಿಗಾಗಿ Kantara.film ಲಿಂಕ್‌ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ರೀಲ್ಸ್‌ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು  ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಡಿ.14 ರವರೆಗೆ ಲಿಂಕ್ ಚಾಲ್ತಿಯಲ್ಲಿರುತ್ತದೆ ಎಂದು ಚಿತ್ರತಂಡ ಹೇಳಿದೆ.

ಸದ್ಯ ಪೋಸ್ಟ್‌ ನೋಡಿ ಖ್ಯಾತ ಟಾಲಿವುಡ್ ನಟಿಯೊಬ್ಬರು ರಿಷಬ್‌ ಶೆಟ್ಟಿ ಬಳಿ ತಮ್ಮನ್ನು ʼಕಾಂತಾರʼ ಸಿನಿಮಾದಲ್ಲಿ ಸೇರಿಸಿಕೊಳ್ಳಿ ಎಂದು ಮನವಿಯನ್ನು ಮಾಡಿದ್ದಾರೆ.

ʼಆರ್‌ ಎಕ್ಸ್‌ 100ʼ ಮೂಲಕ ಗಮನ ಸೆಳೆದ  ನಟಿ ಪಾಯಲ್ ರಜಪೂತ್ ಇತ್ತೀಚೆಗೆ ತೆರೆಕಂಡ ‘ಮಂಗಳವಾರಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಗಳಿಸಿದ್ದಾರೆ. ಇದರಿಂದ ಕೆಲ ಅಭಿಮಾನಿಗಳು ʼಕಾಂತಾರ -1ʼ ಸಿನಿಮಾದ ಅಡಿಷನ್‌ ವಿಚಾರ ತಿಳಿಸಿ ಪಾಯಲ್‌ ಅವರ ಹೆಸರನ್ನು ಸೋಶಿಯಲ್‌ ಮೀಡಿಯಾದಲ್ಲಿ ಮೆನ್ಷನ್‌ ಮಾಡಿದ್ದಾರೆ.

ನಟಿ ಪಾಯಲ್‌ ರಜಪೂತ್‌ ಈ ಬಗ್ಗೆ ಟ್ವೀಟ್‌ ಮಾಡಿದ್ದು, ʼಕಾಂತಾರ-1ʼ ನ ಭಾಗವಾಗಲು ತಾನು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.

Advertisement

“ರಿಷಬ್‌ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ʼಕಾಂತಾರ ಅಧ್ಯಾಯ -1ʼರ ಅಡಿಷನ್‌ ಇರುವುದು ನನಗೆ ಗೊತ್ತಾಗಿದೆ. ಈ ಅದ್ಭುತ ಸಿನಿಮಾದ ಭಾಗವಾಗಲು ನಾನು ಆಸಕ್ತಿ ಹೊಂದಿದ್ದೇನೆ. ಈ ಸಿನಿಮಾಕ್ಕೆ ಕೊಡುಗೆ ನೀಡಲು ಉತ್ಸುಕಳಾಗಿದ್ದೇನೆ. ಇತ್ತೀಚೆಗೆ ಬಂದ ನನ್ನ ʼ’ಮಂಗಳವಾರಂ’ʼ ಸಿನಿಮಾ ಮೆಚ್ಚುಗೆ ಪಡೆದುಕೊಂಡಿದೆ. ನೀವು ಸಾಧ್ಯವಾದರೆ ನಿಮ್ಮ ಸಮಯವನ್ನು ಮೀಸಲಿಟ್ಟು ಸಿನಿಮಾವನ್ನು ನೋಡಿ. ಈ ಪ್ರಾಜೆಕ್ಟ್ ಆಡಿಷನ್ ಪ್ರಕ್ರಿಯೆಯ ಕುರಿತು ದಯವಿಟ್ಟು ಸಲಹೆ ನೀಡಿ. ನನ್ನ ಹೆಸರನ್ನು ಮೆನ್ಷನ್‌ ಮಾಡಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ” ಎಂದು ಪಾಯಲ್‌ ಟ್ವೀಟ್‌ ಮಾಡಿದ್ದಾರೆ.

ಸದ್ಯ ಈ ಟ್ವೀಟ್‌ ಗೆ ರಿಷಬ್‌ ಶೆಟ್ಟಿಯಿಂದ ಯಾವ ಪ್ರತಿಕ್ರಿಯೆ ಬರುತ್ತದೆನ್ನುವುದು ಕಾದುನೋಡಬೇಕಿದೆ.

ಅಂದಹಾಗೆ ʼಕಾಂತಾರʼ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿ ಶುರುವಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next