Advertisement

ಪವನ್ ಕಲ್ಯಾಣ್ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್: ಮೂವರು ಅಭಿಮಾನಿಗಳು ಸಾವು

01:55 PM Sep 02, 2020 | keerthan |

ಚಿತ್ತೂರು (ಆಂಧ್ರ ಪ್ರದೇಶ): ಇಂದು ತೆಲುಗಿನ ಪವರ್ ಸ್ಟಾರ್, ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಜನ್ಮದಿನ. ನೆಚ್ಚಿನ ನಟನ ಜನ್ಮದಿನ ಆಚರಿಸಲು ಬ್ಯಾನರ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಶಾಕ್ ಆಗಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Advertisement

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸೋಮಶೇಖರ್ (30), ಆತನ ಸಹೋದರ ರಾಜೇಂದ್ರ (32) ಮತ್ತು ಗೆಳೆಯ ಅರುಣಾಚಲಂ (28 ವ) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ನಟ, ರಾಜಕಾರಣಿ ಪವನ್ ಕಲ್ಯಾಣ್ ಹುಟ್ಟುಹಬ್ಬ ಪ್ರಯುಕ್ತ ಇವರುಗಳು ನಟನ ಹೆಸರಿನಲ್ಲಿ ಬ್ಯಾನರ್ ಅಳವಡಿಸುತ್ತಿದ್ದರು. ಈ ವೇಳೆ ಅಕಸ್ಮಾತ್ ಅಗಿ ಬ್ಯಾನರ್ ವಿದ್ಯುತ್ ತಂತಿಗೆ ತಗುಲಿದ್ದು, ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ಎನ್ ಸಿಬಿ ದಾಳಿ: ಬೆಂಗಳೂರಿನ ಸೆಲೆಬ್ರಿಟಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದವನ ಬಂಧನ

Advertisement

ಘಟನೆಯ ಬಗ್ಗೆ ಜನ ಸೇನಾ ಪಕ್ಷ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next