Advertisement

Bangladesh ಅಲ್ಪಸಂಖ್ಯಾಕರನ್ನು ರಕ್ಷಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ ಪವನ್ ಕಲ್ಯಾಣ್

09:14 PM Aug 12, 2024 | Team Udayavani |

ಅಮರಾವತಿ (ಆಂಧ್ರಪ್ರದೇಶ): ಬಾಂಗ್ಲಾದೇಶದ ಸರಕಾರ ಪತನಗೊಂಡ ನಂತರ ವ್ಯಾಪಕ ಅರಾಜಕತೆಯ ವೇಳೆ ಅಲ್ಪಸಂಖ್ಯಾಕರನ್ನು ರಕ್ಷಿಸುವಂತೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸೋಮವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಮನವಿ ಮಾಡಿದ್ದಾರೆ.

Advertisement

ಪ್ರಖ್ಯಾತ ನಟ ಮತ್ತು ಜನಸೇನೆಯ ಸಂಸ್ಥಾಪಕ ಪವನ್ ಕಲ್ಯಾಣ್ ಅವರು, ಅಲ್ಪಸಂಖ್ಯಾಕರಾದ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಇಸ್ಲಾಮಿಕ್ ಪಂಥದ ಅಹ್ಮದೀಯರ ರಕ್ಷಣೆಗಾಗಿ ಕರೆ ನೀಡಿದ್ದಾರೆ.

“ನಾನು @UNHuman Rights @UN_HRC(ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ) ಮತ್ತು ಭಾರತದಲ್ಲಿನ ಬಾಂಗ್ಲಾದೇಶದ ಹೈಕಮಿಷನ್ ತತ್ ಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ನಾನು ಕರೆ ನೀಡುತ್ತೇನೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಿಂದೂ ದೇವಾಲಯಗಳ ಧ್ವಂಸವನ್ನು ಉಲ್ಲೇಖಿಸಿ, ನೆರೆಯ ದೇಶದ ಎಲ್ಲ ಅಲ್ಪಸಂಖ್ಯಾಕರ ಸುರಕ್ಷತೆ, ಭದ್ರತೆ ಮತ್ತು ಸ್ಥಿರತೆಗಾಗಿ ಪ್ರಾರ್ಥಿಸಿ, ಬಾಂಗ್ಲಾದೇಶದಿಂದ ಹೊರಹೊಮ್ಮುತ್ತಿರುವ ಇತ್ತೀಚಿನ ದೃಶ್ಯಗಳು ಮತ್ತು ಚಿತ್ರಗಳು ಹೃದಯ ವಿದ್ರಾವಕ ಮತ್ತು ಕಳವಳಕಾರಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next