Advertisement

ಪವನ್‌ ಹನ್ಸ್‌ ಮಾರಾಟ ಬೇಡ: ಪಿಎಂಒಗೆ ಪತ್ರ

09:20 AM Mar 26, 2018 | Team Udayavani |

ಮುಂಬಯಿ: ಹೆಲಿಕಾಪ್ಟರ್‌ ಸೇವೆ ನೀಡುವ ಸರಕಾರಿ ಸ್ವಾಮ್ಯದ ಪವನ್‌ ಹನ್ಸ್‌ ಮಾರಾಟ ಮಾಡುವುದನ್ನು ಪವನ್‌ ಹನ್ಸ್‌ ಹೆಲಿಕಾಪ್ಟರ್ಸ್‌ ಯೂನಿಯನ್‌, ಆಲ್‌ ಇಂಡಿಯಾ ಸಿವಿಲ್‌ ಏವಿಯೇಷನ್‌ ಎಂಪ್ಲಾಯೀಸ್‌ ಯೂನಿಯನ್‌ ವಿರೋಧಿಸಿವೆ. ಈ ಬಗ್ಗೆ ಎರಡೂ ಒಕ್ಕೂಟಗಳು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಪತ್ರ ಬರೆದಿವೆ. ಸಂಸ್ಥೆಯನ್ನು ಮಾರಾಟ ಮಾಡುವ ಬದಲು ಓಎನ್‌ಜಿಸಿ ಹೊಂದಿರುವ ಹಾಲಿ ಪಾಲು ಶೇ.49ನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಜತೆಗೆ ಮಾರುಕಟ್ಟೆಗೆ ಐಪಿಒ ಬಿಡುಗಡೆ ಮಾಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next