ಪಾವಂಜೆ: ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದಲ್ಲಿ ಎ. 13ರಂದು ನಾಲ್ಕನೇ ದಿನದಲ್ಲಿ ನಾಲ್ಕು ಮಂದಿ ವಟುಗಳಿಗೆ ಉಪನಯನವು ವೇದೋಕ್ತವಾಗಿ ನಡೆಯಿತು.
ಯಜ್ಞಾಂಗಣಕ್ಕೆ ಚಿನ್ಮಯ ಮಿಷನ್‌ನ ಮುಖ್ಯಸ್ಥರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಭೇಟಿ ನೀಡಿ ಯಾಗ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಯಾಗದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಕೆ. ಅಭಯಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.
ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಜನಪ್ರತಿನಿ ಧಿಗಳು ಪೂರ್ಣಾಹುತಿಯಲ್ಲಿ ಭಾಗವಹಿಸಿದರು. ಮಹರ್ಷಿ ಜಾತೂಕರ್ಣ ವೇದಿಕೆಯಲ್ಲಿ ಕೊಲೆಕಾಡಿ ವಿಶ್ವಕರ್ಮ ಮಹಿಳಾ ಮಂಡಳಿಯಿಂದ ಭಜನ ಸೇವೆಯನ್ನು ನೀಡಿದರು.
ಕಲ್ಲಡ್ಕ ವಿಟ್ಠಲ ನಾಯಕ್ ಅವರಿಂದ ಸಾಹಿತ್ಯ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸುಮಾ ರು ನಾಲ್ಕು ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ವಿವಿಧ ಆರು ಸಂಘ ಸಂಸ್ಥೆಗಳ ಸದಸ್ಯರು ಅನ್ನಪ್ರಸಾದದ ವಿತರಣೆಯಲ್ಲಿ ತಮ್ಮ ಸೇವೆಯನ್ನು ನೀಡಿದರು.
ಬಳಿಕ ಎಲ್ಲ ಸದಸ್ಯರನ್ನು ಯಾಗ ಸಮಿತಿ ವತಿಯಿಂದ ಗೌರವಿಸಲಾಯಿತು. ಸಂಜೆ ಸುರತ್ಕಲ್‌ನ ಎನ್‌ಐಟಿಕೆ ಸಿಬಂದಿ ಕೂಟದಿಂದ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.