Advertisement

ಸೇವಾರ್ಥಿಗಳಿಂದ ಹರಿದು ಬಂದ ಹೊರೆಕಾಣಿಕೆ

12:21 PM Apr 16, 2018 | Team Udayavani |

ಪಾವಂಜೆ: ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ವಿಶ್ವ ಜಿಗೀಷದ್‌ ಯಾಗ, ವರ್ಷಾವಧಿ ಮಹಾರಥೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ತ್ರಿಕರ್ಣ ಪೂರ್ವಕವಾದ ಧಾರ್ಮಿಕ ವಿಧಿ ವಿಧಾನಗಳು ಸಂಭ್ರಮದಿಂದ ನಡೆಯುತ್ತಿದೆ. ಎ. 17ರವರೆಗೆ ನಡೆಯಲಿರುವ ವಿಶ್ವ ಜಿಗೀಷದ್‌ ಯಾಗದ ಉಗ್ರಾಣಕ್ಕೆ ವಿವಿಧೆಡೆಗಳಿಂದ ಹೊರೆಕಾಣಿಕೆ ಆಗಮಿಸುತ್ತಿದೆ.

Advertisement

ಅಕ್ಕಿಯಿಂದ ಬಾಳೆ ಎಲೆಯವರೆಗೆ
ಅನ್ನಸಂತರ್ಪಣೆಗಾಗಿ ಉಗ್ರಾಣದಲ್ಲಿನ ದಾಖಲೆಯಂತೆ ಅಕ್ಕಿ (3,500 ಕೆ.ಜಿ.), ತೆಂಗಿನಕಾಯಿ (15,000), ಬಾಳೆ ಹಣ್ಣು (65 ಗೊನೆ), ಸೌತೆಕಾಯಿ (600 ಕೆ.ಜಿ.), ಬೆಲ್ಲ (17 ಕ್ವಿಂಟಾಲ್‌), ಸಕ್ಕರೆ (15 ಕ್ವಿಂಟಾಲ್‌), ಹರಳು (150 ಕೆ.ಜಿ.), ಉಳಿದಂತೆ ಕುಂಬಳಕಾಯಿ, ಹಲಸಿನಕಾಯಿ, ಚೀನಿ ಕಾಯಿ (ತಲಾ ಒಂದು ಟನ್‌), ಬಾಳೆ ಎಲೆಗಳು, ಇತರ ತರಕಾರಿಗಳು, ಪಾಮೋಲಿನ್‌, ತೆಂಗಿನ ಎಣ್ಣೆ, ತುಪ್ಪ, ಎಳ್ಳೆಣ್ಣೆ, ತೊಗರೀ ಬೇಳೆ, ಅವಲಕ್ಕಿ, ದವಸ ಧಾನ್ಯ, ಬೆಳ್ತಿಗೆ ಅಕ್ಕಿ, ಕುಚಲಕ್ಕಿ, ಗಂಧ ಸಾಲೆ, ಭಾಸ್ಮತಿ ಅಕ್ಕಿಗಳು ಸೇರಿದೆ. ಇದರೊಂದಿಗೆ ಯಾಗಕ್ಕೆ ಬೇಕಾದ ಎಳ್ಳು, ತೆಂಗಿನ ಸಿಪ್ಪೆ, ಎಳನೀರು, ಹೂ ಹಿಂಗಾರಗಳು ಸೇವಾ ರೂಪದಲ್ಲಿ ಬಂದಿವೆ. ಇವೆಲ್ಲವನ್ನು ದೈನಂದಿನ ಅನ್ನಸಂತರ್ಪಣೆಯಲ್ಲಿ ಬಳಸಲಾಗುತ್ತಿದೆ.

ಭಕ್ತರ ಸೇವೆ ನಿರಂತರ
ಶ್ರೀ ಕ್ಷೇತ್ರ ಪಾವಂಜೆಯು ಅನ್ನದಾನಕ್ಕೆ ವಿಶೇಷವಾಗಿ ಗುರುತಿಸಿಕೊಂಡಿರುವುದರಿಂದ ಯಾಗ, ರಥೋತ್ಸವ,
ಬ್ರಹ್ಮಕಲಶಾ ಧಿ ಉತ್ಸವಕ್ಕೆ ಭಕ್ತರು ತಮ್ಮ ತೋಟ, ಗದ್ದೆಯಲ್ಲಿಯೇ ಬೆಳೆದ ಫಲಗಳನ್ನು ನೀಡಿರುವುದು
ವಿಶೇಷ. ಇವೆಲ್ಲವನ್ನು ಸಾರ್ವತ್ರಿಕವಾದ ಮಹಾ ಅನ್ನಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತಿದೆ.
-ಪಿತಾಂಬರ ಶೆಟ್ಟಿಗಾರ್‌
ಮಂಡಲ ಪ್ರಧಾನರು ಧಾನ್ಯ
ಕೋಶ ಮಂಡಳಿ, ಪಾವಂಜೆ

Advertisement

Udayavani is now on Telegram. Click here to join our channel and stay updated with the latest news.

Next