Advertisement

Pavagada: ವಿದ್ಯುತ್ ತಗುಲಿ 19 ಕುರಿ ಸಾವು

12:11 PM Jul 18, 2023 | Team Udayavani |

ಪಾವಗಡ: ವಿದ್ಯುತ್ ತಂತಿ ತಗುಲಿ 19 ಕುರಿಗಳು ಸಾವನಪ್ಪಿದ ಘಟನೆ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರದಲ್ಲಿ ಜು.17ರ ಸೋಮವಾರ ತಡರಾತ್ರಿ ನಡೆದಿದೆ.

Advertisement

ತಾಲೂಕಿನ ಮಂಜುನಾಥ್ ಎಂಬವರಿಗೆ ಸೇರಿದ ಕುರಿಗಳು ಎಂದು ತಿಳಿದು ಬಂದಿದೆ.

ವಿದ್ಯುತ್ ಕಂಬದ ಸಮೀಪದಲ್ಲಿಯೇ  ಕುರಿ ಶೇಡ್  ಇದ್ದು, ಸೋಮವಾರ ಮಳೆ ಹೆಚ್ಚಾಗಿದ್ದ ಕಾರಣ ಕುರಿ ಮಂದೆಗೆ ವಿದ್ಯುತ್ ತಗುಲಿದೆ. ಮಂದೆಯಲ್ಲಿದ್ದ ಎಲ್ಲ ಕುರಿಗಳು ಸತ್ತು, ಸುಮಾರು 2 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರದದಿಂದ ಅ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next