ಪಾವಗಡ: ಒಂದೇ ವೇಲಿಗೆ ಗಂಡ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಮಧ್ಯರಾತ್ರಿ ಪಾವಗಡ ತಾಲೂಕಿನ ಪಿ.ರೊಪ್ಪ ಗ್ರಾಮದಲ್ಲಿ ನಡೆದಿದೆ.
ಪಿ.ರೊಪ್ಪ ಗ್ರಾಮದ ಮನು(26) ಮತ್ತು ಪತ್ನಿ ಪವಿತ್ರ(24) ಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು.ಗುರುವಾರ ಮಧ್ಯರಾತ್ರಿಯ ಸಮಯದಲ್ಲಿ ಬಾಡಿಗೆಗೆ ಮನೆಯಲ್ಲಿ ಒಂದೇ ವೇಲಿಗೆ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿಗಳಿಗೆ ಎರಡು ವರ್ಷದ ಪುತ್ರಿ ಇದ್ದಾಳೆ.
ಶುಕ್ರವಾರ ಬೆಳಗ್ಗೆ ಮನು ಅವರ ತಾಯಿ ಮನೆಗೆ ಹೋಗಿ ನೋಡಿದಾಗ ಅತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಪಾವಗಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ.