ಸುಬ್ರಹ್ಮಣ್ಯ : ಐತಿಹಾಸಿಕ ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದೇರುಗಳ ಗರಡಿಯಲ್ಲಿ ಪೂರ್ವಶಿಷ್ಠ
ಸಂಪ್ರದಾಯದ ಪ್ರಕಾರ ಪತ್ತನಾಜೆಯ ದಿನ ವಿಶೇಷ ತಂಬಿಲ ಸೇವೆ ನಡೆಯಿತು. ಪಾತ್ರಿಗಳಾದ ಹರೀಶ್ ಮತ್ತು ಗಿರೀಶ್ ದರ್ಶನ ಸೇವೆ ನೆರವೇರಿಸಿದರು. ಬಳಿಕ ಪತ್ತನಾಜೆ ಪೂಜೆ ನಡೆಯಿತು. ಅನಂತರ ಸಂಪ್ರದಾಯ ಪ್ರಕಾರ ಗರಡಿಯ ಬಾಗಿಲು ಹಾಕಲಾಯಿತು.
ಇನ್ನು ಮುಂದಿನ ಚೌತಿಯ ದಿನದಂದು ಗರಡಿಯ ಬಾಗಿಲು ತೆಗೆಯುವುದು. ಅದಕ್ಕಿಂತ ಮುಂಚಿತ ಬಾಗಿಲು ತೆಗೆಯುವ
ಕ್ರಮವಿಲ್ಲ. ಈ ನಡುವೆ ವಿಶೇಷ ಪೂಜಾ ಕಾರ್ಯಕ್ರಮಗಳಿರುವುದಿಲ್ಲ. ಭಕ್ತರ ಪ್ರಾರ್ಥನೆ, ಸಂಕಲ್ಪಗಳು ತಡೆಯಿಲ್ಲದೆ ನಡೆಯುತ್ತಿರುತ್ತವೆ.
ಆನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ವಿಶೇಷ ಸೇವೆ ಸಲ್ಲಿಸಿದವರಿಗೆ ಪ್ರಸಾದ ವಿತರಿಸಿದರು. ಪಂಜಿಮೊಗರು ರಘುನಾಥ ರೈ, ಅಲೆಂಗಾರ ರಘುನಾಥ ರೈ ಕೆ.ಎನ್., ಎನ್.ಜಿ. ಲೋಕನಾಥ ರೈ, ಸುಜಿತ್ ರೈ ಪಟ್ಟೆ, ನಾಗೇಶ್ ಆಳ್ವ ಕಟ್ಟಬೀಡು, ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು, ಶುಭಕರ ಕೆ. ಕಾರ್ಕಳ, ಉದ್ಯಮಿ ಶುಭಕರ, ರಘುಪ್ರಸಾದ್ ಶೆಟ್ಟಿಗುತ್ತು ಎಣ್ಮೂರು, ದಿನೇಶ್ ಅಮೀನ್ ಅಲೆಕ್ಕಾಡಿ, ಶೇಣಿ ಬೈದರುಗಳ ಗರಡಿಯ ಅನುವಂಶಿಕ ಆಡಳ್ತೆದಾರ ಧರ್ಮಪಾಲ ಶೇಣಿ, ಸದಾನಂದ ಶೇಣಿ, ಗಂಗಾಧರ ಪಂಡಿತ್ ಕೇರ್ಪಡ, ವಸಂತ ರೈ ಕಲ್ಲೇರಿ, ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ ಉಪಸ್ಥಿತರಿದ್ದರು.