Advertisement

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ

05:45 AM May 26, 2018 | Karthik A |

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಸಂಜೆ ಹತ್ತನಾವಧಿ (ಪತ್ತನಾಜೆ) ರಂಗಪೂಜೆ, ಉತ್ಸವ ಬಲಿ ನಡೆದು ಧ್ವಜಮರ ಇಳಿಸುವುದರೊಂದಿಗೆ ವಾರ್ಷಿಕ ಉತ್ಸವ ಹಾಗೂ ಸೇವೆಗಳು ಸಮಾಪ್ತಿಗೊಂಡವು. ಕ್ಷೇತ್ರದಲ್ಲಿ ದೀಪಾವಳಿವರೆಗೆ ಸೇವೆ, ರಂಗಪೂಜೆ, ಯಾವುದೇ ಉತ್ಸವಗಳು ನಡೆಯುವುದಿಲ್ಲ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ತನ್ನ ಸೇವೆಯಾಟದ ತಿರುಗಾಟವನ್ನು ಮುಗಿಸಿ ಪತ್ತನಾಜೆಯಂದು ಕ್ಷೇತ್ರಕ್ಕೆ ಮರಳುತ್ತದೆ. ಯಕ್ಷಗಾನ ಮೇಳದ ಗಣಪತಿಯನ್ನು ಬಿಡಾರ ಹೂಡಿದ್ದ ಮಣೆಗಾರರ ಮನೆಯಿಂದ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

Advertisement

ಭಜನ ಕಾರ್ಯಕ್ರಮ
ಹತ್ತನಾವಧಿ ಅಂಗವಾಗಿ ಪ್ರವಚನ ಮಂಟಪದಲ್ಲಿ ಕೋಟ ಕಾಶೀಮಠದ ಮುರಳೀಧರ ಕೃಷ್ಣ ಮಾರುತಿ ಭಜನ ಮಂಡಳಿಯ 14 ಜನ ಸದಸ್ಯರು ಹಾಗೂ ಅಧ್ಯಕ್ಷ ಎಂ. ವಿಘ್ನೇಶ ಪಡಿಯಾರ್‌ ನೇತೃತ್ವದಲ್ಲಿ ಸಂಜೆ ಭಜನ ಕಾರ್ಯಕ್ರಮ ನಡೆಯಿತು.

ಮೆರವಣಿಗೆ
ಗಣಪತಿಯನ್ನು ಕ್ಷೇತ್ರದ ಬಿರುದುಬಾವಲಿ, ಕೇರಳದ ಚೆಂಡೆ ವಾದನ, ವಾದ್ಯ ಮೇಳ, ಬಸವ, ಹೂವಿನ ಕೋಲು, ಆನೆಯೊಂದಿಗೆ ಮೆರವಣಿಗೆ ನಡೆಸಿ ರಥಬೀದಿಯಲ್ಲಿ ಸಾಗಿಬಂದು ಶ್ರೀ ಮಂಜುನಾಥ ಸ್ವಾಮಿ ಮತ್ತು ಅಮ್ಮನವರ ಮುಂದೆ ನರ್ತನ ಸೇವೆಯೊಂದಿಗೆ ಛತ್ರ ಗಣಪತಿಯ ಗರ್ಭಗುಡಿಗೆ ಪ್ರವೇಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next