Advertisement

ಇಂದಿನಿಂದ ಕರಾವಳಿಯಾದ್ಯಂತ ಪತ್ತನಾಜೆ 

08:05 AM Sep 01, 2017 | Team Udayavani |

ಮಂಗಳೂರು: ತುಳುನಾಡಿನ ಜನಜೀವನ ಹಾಗೂ ನಂಬಿಕೆ ಆಚರಣೆಗಳ ಕುರಿತಂತೆ ನಿರ್ಮಾಣವಾದ ಪತ್ತನಾಜೆ ಚಿತ್ರ ತುಳು ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನು ದಾಖಲಿಸುವಂತಾಗಲಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು.

Advertisement

ಸೆ.1ರಂದು ಕರಾವಳಿಯಾದ್ಯಂತ ತೆರೆಕಾಣಲಿರುವ ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿಯವರ ಕಲಾಜಗತ್ತು ಕ್ರಿಯೇಷನ್ಸ್‌ ಲಾಂಛನದಲ್ಲಿ ನಿರ್ಮಾಣವಾದ “ಪತ್ತನಾಜೆ’ ಚಿತ್ರದ ನಗರದ ಬಿಗ್‌ಸಿನೆಮಾದಲ್ಲಿ ಗುರುವಾರ ನಡೆದ ಪ್ರಿಮಿಯರ್‌ ಶೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪತ್ತನಾಜೆ ಎಂಬುದು ತುಳುನಾಡಿನ ಹಿರಿಮೆಯ ಸಂಕೇತ. ಆ ಹೆಸರಿನ ಮೂಲಕ ತಯಾರಾದ ಚಿತ್ರ ತುಳು ನಾಡು ಹೊರತುಪಡಿಸಿ ಜಗತ್ತಿನ ಮೂಲೆ ಮೂಲೆಗೂ ತಲುಪುವಂತಾಗ ಬೇಕು ಎಂದು ಆಸ್ರಣ್ಣ ಅವರು ಶುಭ ಹಾರೈಸಿದರು.
ಚಿತ್ರನಟ ರಾಮಕೃಷ್ಣ ಮಾತನಾಡಿ, ಪ್ರಸ್ತುತ ತುಳು ಭಾಷೆಯಲ್ಲಿ ಅದ್ಭುತ ಚಿತ್ರಗಳು ತೆರೆ ಕಾಣುತ್ತಿವೆ. ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ತುಳುಚಿತ್ರಗಳ ಸಾಲಿಗೆ ಪತ್ತನಾಜೆಯೂ ಸೇರ್ಪಡೆಗೊಳ್ಳಲಿ. ಈ ಮೂಲಕ ಜಗತ್ತಿನಾದ್ಯಂತ ತುಳು ಭಾಷೆಯ ಚಿತ್ರಗಳು ಪಸರಿಸಲಿ. ಚಿತ್ರವು ಯಶಸ್ವಿಯಾಗಲಿ ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ, ಪ್ರಮಖರಾದ ಹರೀಶ್‌ ಶೆಟ್ಟಿ, ಸುಬ್ರಹ್ಮಣ್ಯ, ಎರ್ಮಾಳ್‌ ಹರೀಶ್‌, ಶಾಂತಾರಾಮ ಶೆಟ್ಟಿ, ರಾಜ್‌ಗೊàಪಾಲ್‌, ಫ್ರಾಂಕ್ಲಿನ್‌, ಸುರೇಶ್‌ ಬಾಬು, ಭಾಸ್ಕರ್‌ ರೈ ಕುಕ್ಕುವಳ್ಳಿ, ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ಫ್ರಾಂಕ್‌ ಫೆರ್ನಾಂಡಿಸ್‌, ದಯಾಸಾಗರ್‌ ಚೌಟ, ಶಮೀನಾ ಆಳ್ವ, ತೋನ್ಸೆ ಪುಷ್ಕಳ್‌ ಕುಮಾರ್‌, ಚಿತ್ರನಟ ಶಿವಧ್ವಜ್‌, ನಟ ಸೂರ್ಯರಾವ್‌, ಪ್ರತೀಕ್‌ ಶೆಟ್ಟಿ, ನಾಯಕಿ ರೇಷ್ಮಾ ಶೆಟ್ಟಿ, ಕಾಜಾಲ್‌, ಚೇತನ್‌ ರೈ ಮಾಣಿ, ರಮೇಶ್‌ ಕುಕ್ಕುವಳ್ಳಿ, ಸುಂದರ್‌ ರೈ ಮಂದಾರ, ಮಂಗೇಶ್‌ಭಟ್‌ ಮುಂತಾದ‌ವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next