Advertisement
ಪಟ್ಟಣದ ಪ.ಪಂ ಕಚೇರಿಯಲ್ಲಿ ಶನಿವಾರ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇರುವಂತಹ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಶಾಸಕ ಡಾ. ಜಿ ಪರಮೇಶ್ವರ್ ಮತ್ತು ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಈಗ ಹಣದ ಬಳಕೆಗೆ ಕ್ರಿಯಾ ಯೋಜನೆ ತಯಾರು ಮಾಡಿಕೊಂಡು ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
Related Articles
Advertisement
ಬ್ಲೀಚಿಂಗ್ ಪೌಡರ್ ದರ್ಶನವೇ ಇಲ್ಲ ಆದರೂ ಬಿಲ್ : ಬ್ಲೀಚಿಂಗ್ ಪೌಡರ್ ಖರೀದಿಸಿದ ಬಿಲ್ ಇದೆ ಆದರೆ ಇದನ್ನು ಒಮ್ಮೆಯೂ ಎಲ್ಲಿಯೂ ಪಟ್ಟಣದ ಯಾವೊಂದು ವಾರ್ಡ್ಗೂ ಸಹ ಹಾಕಿದಂತಹ ಕುರುಹು ಇಲ್ಲ ಸುಮ್ಮನೇ ಹೇಗೆ ಬಿಲ್ ತಯಾರಾಗುತ್ತದೆ ಎಂದು ಎಲ್ಲ ಸದಸ್ಯರೂ ಆರೋಗ್ಯ ಅಧಿಕಾರಿ ರೈಸ್ ಅಹಮದ್ ಮೇಲೆ ಹರಿಹಾಯ್ದರು, ನಾನು ಗೆದ್ದು ೩ ವರ್ಷವಾಗಿದೆ ಒಮ್ಮೆಯೂ ನನ್ನ ವಾರ್ಡ್ಗೆ ಬ್ಲೀಚಿಂಗ್ ಪೌಡರ್ ಹಾಕಿಲ್ಲ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್ ನಟರಾಜು ಮಾತನಾಡಿ, ಬ್ಲೀಚಿಂಗ್ ಪೌಡರ್ ಹಾಕುವಂತಹ ಸಂದರ್ಭದಲ್ಲಿ ವಾರ್ಡ್ ಸದಸ್ಯರಿಗೆ ಒಮ್ಮೆ ಮಾಹಿತಿ ಕೊಡಿ ಆಗ ಅವರು ಸ್ಥಳಕ್ಕೆ ಬರುತ್ತಾರೆ ಆಗ ನೀವು ಎಲ್ಲೆಲ್ಲೆ ಬ್ಲೀಚಿಂಗ್ ಪೌಡರ್ ಹಾಕಿದ್ದೀರಾ ಅನ್ನುವ ಮಾಹಿತಿ ಅವರಿಗೂ ಇರುತ್ತದೆ ಇದನ್ನು ಬಿಟ್ಟು ಸುಮ್ಮನೇ ಹಾಕಿದ್ದೇವೆ ಎನ್ನುವ ಮಾಹಿತಿ ಮತ್ತು ಖರೀದಿಗೆ ಬಿಲ್ ತೋರಿಸುವುದು ಬೇಡ ಎಂದು ಕುಟುಕಿದರು.
14 ನೇ ವಾರ್ಡ್ ಸದಸ್ಯರ ಗದ್ದಲ: ಸದಸ್ಯ ಪುಟ್ಟನರಸಪ್ಪ ನಮ್ಮ ವಾರ್ಡ್ ನಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ ಇಲ್ಲಿ ನಮ್ಮ ವಾರ್ಡ್ಗೆ ಮೀಸಲಿರುವ ಹಣವನ್ನೇ ಇತರೆ ವಾರ್ಡ್ಗೆ ಬಳಕೆ ಮಾಡಲಾಗುತ್ತಿದೆ ಹಿಂದುಳಿದ ಬೋವಿ ಕಾಲೋನಿ ನನ್ನ ವಾರ್ಡ್ಲ್ಲಿ ಇದೆ ಇಲ್ಲಿಗೆ ಕುಡಿಯುವ ನೀರಿನ ಪೈಪ್ ಲೈನ್ ಮಾಡುವ ಬಗ್ಗೆ ಹಲವು ಬಾರಿ ತಿಳಿಸಿದರೂ ನಿರ್ಲಕ್ಷ ವಹಿಸಲಾಗುತ್ತೆ ಯಾಗೆ ಈ ದೋರಣೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ.ಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್ ಈ ಬಾರಿ ಸರಿ ಪಡಿಸುವುದಾಗಿ ಹೇಳಿದರು.
ಖಾತೆ ಬಗ್ಗೆ ಮಾಹಿತಿ ಇಲ್ಲ: ಪಟ್ಟಣ ವ್ಯಾಪ್ತಿಗೆ ಒಳಪಡುವಂತಹ ನೂರಾರು ಖಾತೆಗಳು ಆಗುತ್ತಿದೆ ಇದರ ಬಗ್ಗೆ ಮಾಹಿತಿಯೇ ಇಲ್ಲದೇ ಕಚೇರಿಯಲ್ಲಿ ವ್ಯವಹಾರ ನಡೆಯುತ್ತಿದೆ ಇದರ ಮಾಹಿತಿ ಸದಸ್ಯರಿಗೆ ತಿಳಿಯುತ್ತಿಲ್ಲ ಇದನ್ನು ತಿಳಿಸುವಂತೆ ಸದಸ್ಯ ಕೆ.ಆರ್ ಓಬಳರಾಜು ತಿಳಿಸಿದರು.
ಸಭೆಯಲ್ಲಿ ಪ.ಪಂ ಸದಸ್ಯರಾದ ಎ.ಡಿ ಬಲರಾಮಯ್ಯ, ಕೆ.ಆರ್ ಓಬಳರಾಜು,ಲಕ್ಷ್ಮಿನಾರಾಯಣ್ ,ನಾಗರಾಜು, ಗೋವಿಂದರಾಜು, ರಂಗನಾಥ್,ಪ್ರೇಮಕುಮಾರ್, ಉಸ್ಮಾನಿಯಾ ಫಾರಿಯಾ, ಅನಿತ, ಮಂಜುಳಾ ಸತ್ಯನಾರಾಯಣ್, ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ಕಂದಾಯ ನಿರೀಕ್ಷಕ ವೀರಭದ್ರಚಾರ್,ಆರೋಗ್ಯ ನಿರೀಕ್ಷಕ ರೈಸ್ ಅಹಮದ್, ಪ್ರದೀಪ್ ಕುಮಾರ್, ನಾಮಿನಿ ಸದಸ್ಯರಾದ ರಂಗನಾಥ್, ಪ್ರೇಮ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.