Advertisement

ಓದಿನೊಂದಿಗಿರಲಿ ದೇಶಾಭಿಮಾನ

03:57 PM Dec 27, 2021 | Team Udayavani |

ಹುಣಸಗಿ: ಅಧ್ಯಯನದ ಜತೆಗೆ ದೇಶಾಭಿಮಾನವೂ ವಿದ್ಯಾರ್ಥಿಗಳಲ್ಲಿ ಬರಬೇಕು. ಆಗ ಮಾತ್ರ ಸಮೃದ್ಧ ದೇಶ ಕಟ್ಟಲು ಸಾಧ್ಯ ಎಂದು ಡಿವೈಎಸ್‌ಪಿ ಡಾ| ದೇವರಾಜ ಹೇಳಿದರು.

Advertisement

ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ದೇಶ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತು ಅವರು ಮಾತನಾಡಿದರು. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರಂತಹ ಮಹಾತ್ಮರ ತತ್ವ-ಸಂದೇಶ ಜೀವನದಲ್ಲಿ ಮೈಗೂಡಿಸಿಕೊಳ್ಳುವುದರೊಂದಿಗೆ ನೆಲ-ಜಲ, ಜನೋಪಯೋಗಿ ಹೊಸ ಆವಿಷ್ಕಾರ ದೇಶಕ್ಕೆ ಸಮರ್ಪಿಸುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ ಎಂದರು.

ಡಾ| ವೀರಭದ್ರ ಹೊಸಮನಿ ಮಾತನಾಡಿ, ಏಕಾಗ್ರತೆ ಸಾಧಿಸುವ ಛಲ ನಮ್ಮಲ್ಲಿದ್ದರೆ ಏನಾದರೂ ಸಾಧಿಸಬಹುದು. ಹೀಗಾಗಿ ವಿದ್ಯಾರ್ಥಿಗಳಲ್ಲಿ ಛಲ, ಆತ್ಮವಿಶ್ವಾಸ ಇರಬೇಕು ಎಂದರು.

ಪ್ರಾಚಾರ್ಯ ಅಶೋಕ ರಾಜನಕೋಳೂರು ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ವಿಶ್ವನಾಥ, ರಾಮಚಂದ್ರ, ಮಲ್ಲಮ್ಮ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next