Advertisement

ಗಣರಾಜ್ಯೋತ್ಸವಕ್ಕೆ ದೇಶಭಕ್ತಿಯ ನೃತ್ಯ 

08:15 AM Feb 09, 2018 | |

ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಸಿಬಂದಿಗಳಿಂದ ಜರಗಿದ ದೇಶಭಕ್ತಿಗೀತೆಯ ನೃತ್ಯ ಸ್ಪರ್ಧೆ ಸುಂದರವಾಗಿ ಮೂಡಿ ಬಂತು.ಅರ್ಥಪೂರ್ಣವಾದ ಹಾಡುಗಳಿಗೆ ಸೂಕ್ತ ಸಮವಸ್ತ್ರ ಧರಿಸಿ ಹೆಜ್ಜೆ ಹಾಕಿದ್ದು ಔಚಿತ್ಯಪೂರ್ಣವಾಗಿ ಪ್ರಜಾಪ್ರಭುತ್ವವನ್ನು ಸಂಕೇತಿಸಿತು.

Advertisement

ಸುಜಾತ ಮತ್ತು ತಂಡ ಪ್ರದರ್ಶಿಸಿದ “ಸಂದೇಸೆ ಆತೇ ಹೈ’, ಪ್ರಥಮ, “ದೇಸ್‌ ರಂಗೀಲಾ’ ಹಾಡಿಗೆ ಹೆಜ್ಜೆ ಹಾಕಿದ ಜಾಸ್ಮಿನ್‌ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿತು. ಪ್ರೀತಿಕಾ ಮತ್ತು ತಂಡದವರು ಪ್ರಸ್ತುತಪಡಿಸಿದ “ಜಯ್‌ ಹೋ’ ಮತ್ತು “ಸಾರೇ ಜಹಾಂಸೆ ಅಚ್ಚಾ’ ಗಮನ ಸೆಳೆದವು. ಸ್ಪರ್ಧೆಯಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. 

ತೀರ್ಪುಗಾರರಾಗಿ ಮಂಗಳೂರಿನ ಅತ್ತಾವರದ ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯೆ ಡಾ| ನಂದಿತಾ ಶೆಣೈ, ಕೊರಿಯೋಗ್ರಾಫ‌ರ್‌ ಚರಣ್‌ ಸಹಕರಿಸಿದರು.

ಎಲ್‌.ಎನ್‌.ಭಟ್‌ ಮಳಿ

Advertisement

Udayavani is now on Telegram. Click here to join our channel and stay updated with the latest news.

Next