ಶನಿವಾರ ಪ್ರೊಕಬಡ್ಡಿ 5ನೇ ಆವೃತ್ತಿ ಫೈನಲ್ ಪಂದ್ಯ. ಪ್ರಶಸ್ತಿ ಹಣಾಹಣಿಯಲ್ಲಿ ಕನ್ನಡಿಗ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವು ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ ಸೆಣಸಾಡಲಿದೆ. 2 ತಂಡಗಳ ನಡುವೆ ಪ್ರಬಲ ಹೋರಾಟ ನಡೆಯಲಿದೆ. ಈ ಸೆಣಸಾಟದಲ್ಲಿ ಗೆದ್ದು ಯಾರು ಚಾಂಪಿಯನ್ ಆಗಲಿದ್ದಾರೆ?. ಇದು ಈಗ ಉಳಿದಿರುವ ಕುತೂಹಲವಾಗಿದ್ದು ಶನಿವಾರ ಇದಕ್ಕೆಲ್ಲ ಉತ್ತರ ಸಿಗಲಿದೆ.
Advertisement
ಮೊದಲ ಟ್ರೋಫಿ ಎತ್ತಲಿದೆಯೆ ಗುಜರಾತ್?: ಗುಜರಾತ್ ಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸಿದೆ. ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಲೀಗ್ ಹಂತದಿಂದಲೂ ಒಂದು ತಂಡವಾಗಿ ಸುಕೇಶ್ ನಾಯಕತ್ವದ ಗುಜರಾತ್ ನೀಡಿದ ನಿರ್ವಹಣೆ ಎಲ್ಲರ ಗಮನ ಸೆಳೆದಿದೆ. ಲೀಗ್‌ನಲ್ಲಿ ಗುಜರಾತ್ ಒಟ್ಟಾರೆ 22 ಪಂದ್ಯ ಆಡಿತ್ತು. 15 ಪಂದ್ಯದಲ್ಲಿ ಗೆದ್ದು ಕೇವಲ 4 ಪಂದ್ಯದಲ್ಲಿ ಸೋತಿದೆ. ಹಾಗೂ 3 ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಒಟ್ಟಾರೆ 87 ಪಂದ್ಯ ಆಡಿ ಗುಜರಾತ್ ಕೂಟದಲ್ಲಿ ಶ್ರೇಷ್ಠ ನಿರ್ವಹಣೆ ನೀಡಿತ್ತು. ಕ್ವಾಲಿಫೈಯರ್ 1ರಲ್ಲಿ ಗುಜರಾತ್ 42-17 ಅಂಕಗಳ ಅಂತರದಿಂದ ಬೆಂಗಾಲ್ ವಾರಿಯರ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ರೈಡಿಂಗ್‌ನಲ್ಲಿ ಸಚಿನ್, ಮಹೇಂದ್ರ ರಜಪೂತ್ ತಾರಾ ಆಟಗಾರರಾಗಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಮಹಿಪಾಲ್ ನರ್ವಾಲ್, ರೋಹಿತ್ ಗುಲಿಯಾ ಇದ್ದಾರೆ. ರಕ್ಷಣಾ ವಿಭಾಗದಲ್ಲಿ ಪರ್ವೇಶ್ ಇರುವುದು ಕೂಡ ತಂಡಕ್ಕೆ ಬಲ. ಫಜಲ್ ಅಟ್ರಾಚಲಿ ರೈಡಿಂಗ್‌ನಲ್ಲಿ ಗಮನ ಸೆಳೆಯಬಲ್ಲರು.
ಪಾಟ್ನಾ ಪೈರೇಟ್ಸ್: ಪ್ರದೀಪ್ ನರ್ವಲ್ (ನಾಯಕ), ವಿಶಾಲ್ ಮಾನೆ, ಸಚಿನ್ ಶಿಂಗಡೆ, ವಿಜಯ್, ಮೋನು ಗೋಯತ್, ಜವಾಹರ್ ದಾಗರ್, ಜೈದೀಪ್, ಝಾಕೀರ್ ಹೊಸೈನ್, ಸಂದೀಪ್, ಮನೀಶ್, ವಿಕಾಸ್ ಜಗ್ಗಿಯಾನ್, ವಿನೋದ್ ಕುಮಾರ್.
ಗುಜರಾತ್ ಫಾರ್ಚೂನ್‌ಜೈಂಟ್ಸ್: ಸುಕೇಶ್ ಹೆಗ್ಡೆ (ನಾಯಕ), ಸಚಿನ್, ಸುನೀಲ್ ಕುಮಾರ್, ಪರ್ವೇಶ್, ಮಹೇಂದ್ರ ರಜಪೂತ್, ರಾಕೇಶ್ ನರ್ವಾಲ್, ಅಬೋಜರ್ ಮಿಗಾನಿ, ಫಜಲ್ ಅಟ್ರಾಚಲಿ, ಮನೋಜ್ ಕುಮಾರ್, ಸುಲ್ತಾನ್ ದಂಗೆ, ಪವನ್ ಸೆಹ್ರಾವತ್, ಚಂದ್ರನ್ ರಂಜಿತ್
Related Articles
ವಿನ್ನರ್: 3 ಕೋಟಿ ರೂ.
ರನ್ನರ್‌ಅಪ್: 1.8 ಕೋಟಿ ರೂ.
ತೃತೀಯ: 1.2 ಕೋಟಿ ರೂ.
ನೇರ ಪ್ರಸಾರ: ಸ್ಟಾರ್ ನ್ಪೋರ್ಟ್ಸ್ 2
ಸಮಯ: ರಾತ್ರಿ 8ಕ್ಕೆ
Advertisement
ಪಾಟ್ನಾ ಸತತ 2 ಬಾರಿ ಚಾಂಪಿಯನ್2016, ಯು ಮುಂಬಾ ವಿರುದ್ಧ 31-28 ಅಂತರದ ಜಯ
2016, ಜೈಪುರ ವಿರುದ್ಧ 37-29 ಅಂತರದ ಗೆಲುವು