Advertisement

ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌ ಗೆ ಸತತ 5ನೇ ಗೆಲುವು

10:53 PM Feb 15, 2022 | Team Udayavani |

ಬೆಂಗಳೂರು ಆರಂಭದಲ್ಲಿ ಸತತ ವಾಗಿ ಗೆಲ್ಲುತ್ತಿದ್ದ ಬೆಂಗಳೂರು ಬುಲ್ಸ್‌ ಪ್ರಸ್ತುತ ಪ್ರೊ ಕಬಡ್ಡಿ ಕೂಟದಲ್ಲಿ ಪದೇಪದೇ ಸೋಲು ಕಾಣಲು ಆರಂಭಿಸಿದೆ.

Advertisement

ಕೂಟದ ಪ್ರಬಲ ತಂಡಗಳಲ್ಲಿ ಒಂದಾದ ಪಾಟ್ನಾ ಪೈರೇಟ್ಸ್‌ ಎದುರು ಪವನ್‌ ಸೆಹ್ರಾವತ್‌ ನಾಯಕತ್ವದ ಬುಲ್ಸ್‌ ಮಂಗಳವಾರ ಸೋಲು ಅನುಭವಿಸಿದೆ. ಅಂತರ 34-36. ಇದರಿಂದ ಪಾಟ್ನಾ ಅಗ್ರಸ್ಥಾನ ಗಟ್ಟಿಯಾದರೆ, ಬೆಂಗಳೂರು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ.

ಬುಲ್ಸ್‌ಗೆ ಮುಳುವಾಗಿದ್ದು ಮೊದಲರ್ಧದಲ್ಲಿ ಅನುಭವಿಸಿದ ಹಿನ್ನಡೆ. ಎರಡನೇ ಅವಧಿಯಲ್ಲಿ ತಿರುಗಿಬಿದ್ದರೂ ಕೇವಲ ಎರಡು ಅಂಕಗಳ ಅಂತರದಿಂದ ಸೋಲಬೇಕಾಯಿತು.

ಬೆಂಗಳೂರು ಪರ ಪ್ರಮುಖ ದಾಳಿಗಾರರಾದ ನಾಯಕ ಪವನ್‌ ಸೆಹ್ರಾವತ್‌ (15 ದಾಳಿ, 7 ಅಂಕ), ಭರತ್‌ (9 ದಾಳಿ, 4 ಅಂಕ) ನಿರೀಕ್ಷೆಯಷ್ಟು ಉತ್ತಮ ದಾಳಿ ಮಾಡಲಿಲ್ಲ. ಇನ್ನು ಪಾಟ್ನಾ ಪರ ಸಚಿನ್‌, ಮೋನು ಗೋಯತ್‌ ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ ಪಾಟ್ನಾ ಸಂಘಟಿತ ಪ್ರದರ್ಶನ ನೀಡಿದ್ದು ಅದರ ಗೆಲುವಿಗೆ ಮುಖ್ಯ ಕಾರಣವಾಯಿತು.

ಇದನ್ನೂ ಓದಿ:ತಮಿಳಿನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ವಿವಾಹ ಆಮಂತ್ರಣ ಪತ್ರಿಕೆ

Advertisement

ಮುಂಬಾಗೆ ಸೋಲು
ದಿನದ ಮೊದಲ ಪಂದ್ಯದಲ್ಲಿ ಜೈಪುರ ತಂಡ ಯು ಮುಂಬಾ ವಿರುದ್ಧ 44-28 ಅಂತರದಿಂದ ಗೆಲುವು ಸಾಧಿಸಿತು. ಜೈಪುರ ಪರ ರೈಡರ್‌ ಅರ್ಜುನ್‌ ದೇಸ್ವಾಲ್‌ 17 ಅಂಕ ಗಳಿಸಿದರು. ಮುಂಬಾ ಪರ ವಿ. ಅಜೀತ್‌ 11 ಅಂಕ ಸಂಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next