Advertisement

ಪಟ್ಲ ಪ್ರಶಸ್ತಿಗೆ ಜೋಷಿ

06:19 PM May 23, 2019 | mahesh |

ಕಾರ್ಕಳದ ಮಾಳದಿಂದ ಮಂಗಳೂರಿಗೆ ಬಂದು ನೆಲೆಸಿದ ತನ್ನ ಅದಮ್ಯ ಜೀವನಾಸಕ್ತಿ, ಮಗು ಸಹಜ ಕುತೂಹಲಗಳಿಂದ ಬೆಳೆದ ಡಾ| ಪ್ರಭಾಕರ ಜೋಷಿ ಎಂಬ ಅದ್ಭುತಕ್ಕೆ 2019ನೇ ಸಾಲಿನ ಯಕ್ಷಧ್ರುವ ಪಟ್ಲ ಟ್ರಸ್ಟ್‌ ಪ್ರದಾನಿಸುವ ಪಟ್ಲ ಪ್ರಶಸ್ತಿ ಸಂದರ್ಭದಲ್ಲಿ ಅವರನ್ನು ಕಾಣುವ ಪ್ರಯತ್ನವಿದು. ಯಕ್ಷಗಾನ -ತಾಳಮದ್ದಳೆ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧಕರಿವರು. ದಿ.ಶೇಣಿ ಗೋಪಾಲಕೃಷ್ಣ ಭಟ್‌, ದಿ.ದೇರಾಜೆ ಸೀತಾರಾಮಯ್ಯ ಮುಂತಾದ ಧೀಮಂತ ಅರ್ಥಧಾರಿಗಳ ಜತೆಗೆ ಸಹ ಕಲಾವಿದನಾಗಿ ಬೆಳೆದವರು ಜೋಷಿ.

Advertisement

ವೃತ್ತಿಯಿಂದ ವಾಣಿಜ್ಯಶಾಸ್ತ್ರ ಬೋಧಕನಾಗಿದ್ದು ಪ್ರವೃತ್ತಿಯಿಂದ ತತ್ವಶಾಸ್ತ್ರ, ವೇದ-ವೇದಾಂತ, ದರ್ಶನ ಶಾಸ್ತ್ರ, ಸೌಂದರ್ಯ ಶಾಸ್ತ್ರಗಳ ಸ್ವಾಧ್ಯಾಯ ಮತ್ತು ಉಪನ್ಯಾಸ ಇವುಗಳಿಂದ ಅನನ್ಯರಾಗಿ ಜೋಷಿಯವರು ಕಾಣಿಸುತ್ತಾರೆ. ಶಂಕರ ಭಗವತ್ಪಾದರು, ಅದ್ವೆ„ತ ಸಿದ್ಧಾಂತ, ಕುಮಾರಿಲ ಭಟ್ಟ, ಮಹಾಮಾಹೇಶ್ವರ ಅಭಿನವ ಗುಪ್ತಪಾದಾಚಾರ್ಯರ ಬಗೆಗೆ ಅನೇಕ ಉಪನ್ಯಾಸಗಳನ್ನೂ ಮಾಡಿ¨ªಾರೆ. ತತ್ವಶಾಸ್ತ್ರದ ಬಗೆಗೆ ತತ್ವ ಮನನ ಮತ್ತು ಭಾರತೀಯ ತತ್ವಶಾಸ್ತ್ರ ಎಂಬ ಗ್ರಂಥವನ್ನೂ ಮತ್ತು ಪ್ರೊ| ಎಂ.ಎ.ಹೆಗಡೆಯವರ ಜತೆಯಾಗಿ ಭಾರತೀಯ ತತ್ವಶಾಸ್ತ್ರ ಪರಿಚಯ ಮತ್ತು ಭಾರತೀಯ ತತ್ವಶಾಸ್ತ್ರ ಪ್ರವೇಶ ಎಂಬ ಗ್ರಂಥವನ್ನೂ ರಚಿಸಿದ್ದಾರೆ.

ಯಕ್ಷಗಾನಕ್ಕೆ ಸಂಬಂಧಿಸಿದಂತೆ ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ಯಕ್ಷಗಾನ ಪದಕೋಶ, ತಾಳಮದ್ದಳೆ, ವಾಗರ್ಥ, ಕೃಷ್ಣ ಸಂಧಾನ ಮತ್ತು ಪ್ರಯೋಗ ಎಂಬ ಪಿ.ಹೆಚ್‌.ಡಿ ಅಧ್ಯಯನ ಮಹಾಪ್ರಬಂಧ, ಯಕ್ಷಗಾನ ಸ್ಥಿತಿಗತಿ ಮುಂತಾದ ಹದಿಮೂರಕ್ಕೂ ಮಿಕ್ಕಿ ಸ್ವತಂತ್ರ ಕೃತಿಗಳು ಹಾಗು ಕುಕ್ಕಿಲ ಸಂಪುಟ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಅಭಿನಂದನಾ ಗ್ರಂಥ ಇವುಗಳೇ ಮುಂತಾದ ಗ್ರಂಥಗಳು ಇವರ ಸಂಪಾದನದಲ್ಲಿ ಬಂದ ಕೃತಿಗಳು.

ಯಕ್ಷಗಾನವು ಕೇವಲ ಸಂಪ್ರದಾಯ ಬದ್ಧತೆಯ ಕಂಬಿಗಳೆಡೆಯಲ್ಲಿರದೆ ವಿಶ್ವರಂಗ ಭೂಮಿಕೆಯಲ್ಲಿ ಸಮರ್ಥ ರಂಗಕಲೆಯಾಗಿ ನಿಲ್ಲಬೇಕೆಂಬ ಆಶಯ ಅವರ ಬರಹ, ಮಾತು, ಭಾಷಣಗಳಲ್ಲಿ ಕಾಣಬಹುದಾಗಿದೆ. ಜೋಷಿಯವರ ವಿಚಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಯಕ್ಷಗಾನ ಕ್ಷೇತ್ರದಲ್ಲಿ ಪ್ರಭಾವ ಬೀರಿವೆ. ವಿಶ್ವರಂಗ ಭೂಮಿಯ ಕಣ್ಣಲ್ಲಿ ಯಕ್ಷಗಾನದ ಸ್ಥಾನ ಮತ್ತು ಅದರ ಶಕ್ತಿ ಏನೆಂಬುದನ್ನು ಅವರು ಗ್ರಹಿಸಿದ್ದಾರೆ.

ವಿಮರ್ಶೆಯ ಕುರಿತು ಹೇಳುತ್ತಾ ಜೋಶಿಯವರು- ವಿಮರ್ಶೆಯು ಕಲಾ ರಸಿಕನಿಗೂ ಕತೆಗೂ ಹೊಸ ಪ್ರಚೋದನೆ ನೀಡಬೇಕು, ನಿಲುಮೆಗಳನ್ನು ತಳೆಯುವ ಅಥವಾ ನಿರಾಕರಿಸುವ, ಭಿನ್ನಾಭಿಪ್ರಾಯಗಳನ್ನು , ಚರ್ಚೆಯನ್ನು ಪ್ರಚೋದಿಸುವುದೂ ವಿಮರ್ಶೆಯ ಒಂದು ಕೆಲಸವೇ ಆಗಿದೆ. ಅರ್ಥಧಾರಿಯಾಗಿಯೂ ಸೂಕ್ಷ್ಮ, ವಿಮರ್ಶಕನಾಗಿಯೂ ಇಲ್ಲಿ ಉಲ್ಲೇಖೀಸಬೇಕಾದ ಜೋಷಿಯವರ ಮಾತು ಈ ಕ್ಷೇತ್ರದ ವಿಮರ್ಶೆಯ ತಾತ್ವಿಕ ವಿವೇಚನೆ ಆಗಿಲ್ಲ. ಹಾಗಾಗಿ ಯಕ್ಷಗಾನ ವಿಮಶಾì ಶಾಸ್ತ್ರ ಬೆಳೆದಿಲ್ಲ. ಅದು ಬೆಳೆದಿದ್ದರೆ ಯಕ್ಷಗಾನ ಇಂದು ಇರುವಂತೆ ಇರುತ್ತಿರಲಿಲ್ಲ. ಯಕ್ಷಗಾನ ರಂಗಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಲು ವಿಮರ್ಶಕರು ವಿಫ‌ಲರಾಗಿದ್ದಾರೆ. ಈ ಸೋಲನ್ನು ನಾವು ಒಪ್ಪಿಕೊಳ್ಳಬೇಕು. ಇದರಿಂದಾಗಿ ವಿಮರ್ಶೆಗೆ ಮುಕ್ತವಾಗಿ ಒಡ್ಡಿಕೊಳ್ಳಲು ಯಕ್ಷಗಾನ ರಂಗ ಇನ್ನೂ ಸಿದ್ಧವಾಗಬೇಕೆಂಬ ಚಿಂತನೆ ಜೋಷಿಯವರದ್ದು.

Advertisement

– ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next