Advertisement

ಅನ್ನದಾತರ ಆತ್ಮಸ್ಥೈರ್ಯ ಬದುಕಿಗೆ ಪಾಟೀಲ ಮೆಚ್ಚುಗೆ

12:11 PM Dec 04, 2018 | |

ಇಂಡಿ: ಮುಂಗಾರು, ಹಿಂಗಾರು ಸಂಪೂರ್ಣ ವಿಫಲ ಆಗಿರುವುದರಿಂದ ಬರಗಾಲ ಬೆಂಬಿಡದೆ ಬೆನ್ನು ಹತ್ತಿದೆ. ಇದು ಇಂದು ನಿನ್ನೆಯದೇನಿಲ್ಲ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ. ಇಂತಹ ಅನೇಕ ಸಂಕಷ್ಟಗಳ ಮಧ್ಯ ಈ ಭಾಗದ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಬದುಕು ಸಾಗಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

Advertisement

ತಾಲೂಕಿನ ತಡವಲಗಾ ಗ್ರಾಮದ ಜೋಡ ಗುಡಿ ಹತ್ತಿರ ಆಯೋಜಿಸಿ ಕೃಷಿ ಅಭಿಯಾನ ಹಾಗೂ ಲಿಂಬೆ, ಕಬ್ಬು ಇತರೆ ಬೆಳೆಗಳ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬರಗಾಲ ಎದುರಿಸುವ ಸಂದರ್ಭದಲ್ಲಿ ನಾವು ಯಾವ ರೀತಿಯಾಗಿ ಬೆಳೆಗಳನ್ನು ಉಳಿಸಬೇಕಾಗಿದೆ ಎನ್ನುವುದು ನಮ್ಮೆಲ್ಲರ ಕರ್ತವ್ಯ. ಸರಕಾರ ಹಿಂದೆ ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಸಹಾಯಕ್ಕೆ ಬಂದಿದೆ. ಇಂದು ಮಳೆ ಕಡಿಮೆಯಾಗಿರುವುದರಿಂದ ಈ ಬಾರಿ ತೊಗರಿ ಪ್ರಮಾಣ ಕಡಿಮೆಯಾಗಿದೆ. ಉಳಾಗಡ್ಡಿ, ಲಿಂಬೆ ಹಣ್ಣಿನ ಬೆಲೆ ಕುಸಿದಿರುವುದರಿಂದ ರೈತರು ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಿದ್ದಾರೆ. 

ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಸರಕಾರಗಳು ಮಾಡಬೇಕಾಗುತ್ತದೆ. ನಾನು ಕೂಡಾ ಈ ಭಾಗದ ಧ್ವನಿಯಾಗಿ ಬರುವ ಅಧಿವೇಶನದಲ್ಲಿ ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು. ಬೇಸಿಗೆ ಸಂದರ್ಭದಲ್ಲಿ ಈ ಭಾಗದಲ್ಲಿ ನೀರು ಹರಿಯದಕ್ಕೆ ಕಾರಣ ಯೋಜಿತ ಯೋಜನಾ ಪ್ರದೇಶದ ಕೊನೆ ಭಾಗದಲ್ಲಿರುವುದರಿಂದ ಗುತ್ತಿ ಬಸವಣ್ಣ ನೀರಾವರಿ ಯೋಜನೆ ಕಾಲುವೆ ನೀರು ಬರುವದು ಅತ್ಯಂತ ಕಷ್ಟವಾಗಿದೆ.

 ನಿರಂತರ ಮಳೆ ಆದಾಗ ಮತ್ತು ಆಲಮಟ್ಟಿ ಡ್ಯಾಂ ತುಂಬಿದಾಗ ಮಾತ್ರ ಪರಿಹಾರ ಸಾಧ್ಯ. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದೆ. ಇಂದಿನ ಮೈತ್ರಿ ಸರಕಾರ ಕೂಡಾ ರೈತರ ಸಾಲ ಮನ್ನಾ ಮಾಡುವ ಉದ್ದೇಶ ಹೊಂದಿದೆ ಎಂದರು. ಕೃಷಿಯಲ್ಲಿ ರೈತರು ತೋಡಗಬೇಕಾದರೆ ಮಳೆ ಹಂಚಿಕೆ ಪ್ರಕಾರ ನಮ್ಮ ಪೂರ್ವಜರು ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಇಂದು ಮಳೆಯ ಅಭಾವದಿಂದ ಪರಿಸರದಲ್ಲಿ ಸಾಕಷ್ಟು ಏರುಪೇರುಗಳು ಕಂಡು ಬರುತ್ತಿವೆ. ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದಾರೆ.

Advertisement

ಇಂದು ಯಾವುದೇ ಬೆಳೆಗಳು ಬೆಳೆಯಬೇಕಾದರೆ ನೀರಾವರಿ ಪ್ರಮುಖವಾಗಿದೆ. ಇಂತಹ ವೈಪರಿತ್ಯಗಳನ್ನು ರೈತರು ಹೇಗೆ ಎದುರಿಸಬೇಕು? ಎಂಬ ವಿಚಾರವೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಹರಿಹಾರ ಕಂಡುಕೊಳ್ಳಲು ಶ್ರಮಿಸೋಣ ಎಂದು ಜಂಟಿ ನಿರ್ದೇಶಕ ಶಿವಕುಮಾರ ಹೇಳಿದರು. 

ಜಿಪಂ ಸದಸ್ಯ ಮಹಾದೇವಪ್ಪ ಗಡ್ಡದ, ತಾಪಂ ಅಧ್ಯಕ್ಷ ಶೇಖರ ನಾಯಕ, ಎಪಿಎಂಸಿ ಅಧ್ಯಕ್ಷ ಶಿವಯೋಗೇಪ್ಪ .ಎಸ್‌ ಚನಗೊಂಡ, ಗ್ರಾಪಂ ಅಧ್ಯಕ್ಷೆ ಕಲ್ಯಾಣಿ ಗಣವಲಗಾ, ತಾಪಂ ಸದಸ್ಯ ಗಣಪತಿ ಬಾಣಿಕೋಲ, ತಾಪಂ ಸದಸ್ಯ ಸೋಮಶೇಖರ ಬ್ಯಾಳಿ, ಎಂ.ವಿ. ಕತ್ತಿ, ಭೀಮಾಶಂಕರ ಮುರಗುಂಡಿ, ಸುನಂದಾ ವಾಲಿಕಾರ, ಸದಾಶಿವ ಪ್ಯಾಟಿ, ಭೀಮಣ್ಣಾ ಕೌಲಗಿ, ಜಟ್ಟೆಪ್ಪ ಮರಡಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ವಿರೂಪಾಕ್ಷ ಬಣಕಾರ, ಆರ್‌.ಟಿ. ಹಿರೇಮಠ, ಉಪನಿರ್ದೇಶಕ ಸಂತೋಷ ಇನಾಮದಾರ, ಕೃಷಿ ವಿಜ್ಞಾನಿ ಡಾ| ಪರಜಾದೆ ಹಾಗೂ ರಾಘವೇಂದ್ರ ಆಚಾರ್ಯ, ರಾಜ್ಯ ರೈತ ಸಲಹಾ ಸಮಿತಿ ಸದಸ್ಯರಾದ ರಾಜಶೇಖರ ನಿಂಬರಗಿ, ಡಾ| ನೇಗಳೂರ, ಕೃಷಿ ನಿರ್ದೇಶಕ ಶಿವುಕುಮಾರ, ರೈತ ಮುಖಂಡರಾದ ತಮ್ಮಣ್ಣಾ ಪೂಜಾರಿ, ಧಾನಮ್ಮಾಗೌಡತಿ ಬಿರಾದಾರ, ಚಂದ್ರಶೇಖರ ರೂಗಿ, ಡಾ| ಹೀನಾ.ಎಂ. ಎಸ್‌, ರೋಗ ಶಾಸ್ತ್ರಜ್ಞರಾದ ಡಾ| ಸೈದಾ ಸಮೀನಾ ಅಂಜುಮ ಇದ್ದರು. ತಾಲೂಕಿನ ತಡವಲಗಾ ಹಿರೇರೂಗಿ, ತಾಂಬಾ, ನಿಂಬಾಳ, ಹೋರ್ತಿ, ಸಾಲೋಟಗಿ, ಝಳಕಿ, ಅಥರ್ಗಾ, ಬೆನಕನ್ನಳ್ಳಿ, ಶಿರಕನ್ನಳ್ಳಿ ಹಾಗೂ ಸುತ್ತಮುತ್ತಲಿನ ಸುಮಾರು ಸಾವಿರಾರು ರೈತರು ಕಾರ್ಯಾಗಾರದಲ್ಲಿ ಭಾಗಿಯಾದರು. ರಾಘವೇಂದ್ರ ಎಂ ಸ್ವಾಗತಿಸಿದರು. ಬಾಹುರಾಜ ಕಲಘಟಗಿ ನಿರೂಪಿಸಿದರು. ಮಹಾದೇವಪ್ಪ ಏವೋರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next