Advertisement

ತಂದೆ ಸಮಾಧಿಗೆ ನಮನ ಸಲ್ಲಿಸಿದ ಪಾಟೀಲ

09:12 AM Jan 04, 2019 | |

ವಿಜಯಪುರ: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ತವರು ಜಿಲ್ಲೆಗೆ ವಿಜಯಪುರಕ್ಕೆ ಆಗಮಿಸಿದ
ಎಂ.ಬಿ.ಪಾಟೀಲ ಅವರು ತಮ್ಮ ತಂದೆ ಮಾಜಿ ಸಚಿವ ದಿ.ಬಿ.ಎಂ.ಪಾಟೀಲ ಹಾಗೂ ಇತರೆ ಮಹಾತ್ಮರ ಸಮಾಧಿ ಗೆ ನಮನ ಸಲ್ಲಿಸಿದರು.

Advertisement

ಗುರುವಾರ ಬೆಳಗ್ಗೆ ಪತ್ನಿ ಆಶಾ ಪಾಟೀಲ, ಸಹೋದರಿ ಕಲ್ಪನಾ ಪಾಟೀಲ ಅರೊಂದಿಗೆ ಆಗಮಿಸಿದ ಸಚಿವರು ತಂದೆ ಬಿ.ಎಂ. ಪಾಟೀಲ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು.

ನಂತರ ಬಂಥನಾಳದ ಸಂಗನಬಸವ ಶ್ರೀಗಳ, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಮಾಧಿಗೆ ಹಾಗೂ 770 ಅಮರ ಗಣಾಧೀಶರ ಲಿಂಗದ ದೇವಸ್ಥಾನಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ನಂತರ ಹಳಕಟ್ಟಿ ಭವನದಲ್ಲಿ ಬಿಎಲ್‌ಡಿಇ ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಜಿ.ಕೆ.ಪಾಟೀಲ, ಬಿಎಲ್‌
ಡಿಇ ವಿಶ್ವವಿದ್ಯಾಲಯದ ಪರವಾಗಿ ಪರವಾಗಿ ಉಪಕುಲಪತಿ ಡಾ.ಎಂ.ಎಸ್‌.ಬಿರಾದಾರ, ಸಂಸ್ಥೆಯ ಎಲ್ಲ ಪ್ರಾಚಾರ್ಯರ ಪರವಾಗಿ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಕೆ.ಜಿ.ಪೂಜಾರಿ ಅವರು ಸಚಿವ ಎಂ.ಬಿ.ಪಾಟೀಲ ಅವರನ್ನು ಗೌರವಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ ಅವರು, ನಮ್ಮ ಹಿರಿಯರಾದ ಸಂಗನಬಸವ ಶ್ರೀಗಳು, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಹಾಗೂ ನನ್ನ ತಂದೆ ದಿ.ಬಿ.ಎಂ.ಪಾಟೀಲ ಅವರಿಗೆ ನಮನ ಸಲ್ಲಿಸಿ, ನನ್ನ ಕಾರ್ಯ ಆರಂಭಿಸಿದ್ದೇನೆ. 

Advertisement

ಜ.4 ರಂದು ಬೆ.11 ಗಂ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಬಳಿಕ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next