ಉಡುಪಿ: ಮಂಗಳೂರು-ಮುಂಬಯಿ ಮತ್ಸ್ಯ ಗಂಧ ರೈಲಿಗೆ ಹಳೆಯ ಕೋಚ್ ಬದಲು ಹೊಸ ಎಲ್‌ಎಚ್‌ಬಿ ಕೋಚ್ ಹಾಕಲು ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಕೇಂದ್ರ ರೈಲ್ವೇ ಸಚಿವರಿಗೆ ಪತ್ರ ನೀಡಿ ಒಂದೇ ವಾರದಲ್ಲಿ ಮತ್ಸéಗಂಧ ರೈಲಿನ ಎಸಿ ಕೋಚಿನ ತಗಡಿನ ಛಾವಣಿಯ ಶೀಟ್ ಕಳಚಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಈ ಘಟನೆಯ ಅನಂತರ ಸಂಸದರ ಬೇಡಿಕೆಯಂತೆ ಹಳೆಯ ಕೋಚ್ ಬದಲು ಎಲ್‌ಎಚ್‌ಬಿ ಕೋಚ್ ಬದಲಾವಣೆಯ ಬೇಡಿಕೆ ಈಡೇರಿಸುವ ಒತ್ತಾಯ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಕರಾವಳಿಯ ಪ್ರಯಾಣಿಕರಿಂದಲೂ ಆಗ್ರಹ ಕೇಳಿ ಬಂದಿದೆ.
ರೈಲು ಸೇವೆ ಆರಂಭವಾಗಿ 26 ವರ್ಷ ಉರುಳಿದರೂ ಹಳೆಯ ಐಸಿಎಫ್ ಕೋಚ್‌ಗಳಲ್ಲೇ ದಕ್ಷಿಣ ರೈಲ್ವೇ ವಿಭಾಗದಿಂದ ಮತ್ಸ್ಯಗಂಧ ರೈಲನ್ನು ಓಡಿಸುತ್ತಿದ್ದು, ಆಧುನಿಕ ಸುರಕ್ಷಿತ ಎಲ್‌ಎಚ್‌ಬಿ ಕೋಚ್ ಬೇಕು ಎಂಬ ಪ್ರಯಾಣಿಕರ ಬೇಡಿಕೆ ಇದುವರೆಗೂ ಈಡೇರಿಲ್ಲ.
ಘಟನೆ ಬಗ್ಗೆ ಮಾಹಿತಿ ಪಡೆದ ಕೋಟ ಶ್ರೀನಿವಾಸ್ ಪೂಜಾರಿ ಅವರು ತತ್‌ಕ್ಷಣವೇ ದಕ್ಷಿಣ ರೈಲ್ವೇ ಹಾಗೂ ರೈಲ್ವೇ ಸಚಿವರಿಗೆ ವಿಷಯ ತಲುಪಿಸುವುದಾಗಿ ತಿಳಿಸಿದ್ದು, ಅತ್ಯಂತ ಕ್ಷಿಪ್ರವಾಗಿ ಮತ್ಸ್ಯ ಗಂಧ ರೈಲಿನ ಕೋಚ್ ಎಲ್‌ಎಚ್‌ಬಿ ಮಾಡಲು ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.
ಜು.23ರಂದು ಸಂಸದರು ಎಲ್‌ಎಚ್‌ಬಿ ಕೋಚ್‌ಗಾಗಿ ನೀಡಿದ ಪತ್ರ ಹಾಗೂ ಅಗಸ್ಟ್ ಮೊದಲ ವಾರದಲ್ಲಿ ಕೋಚ್‌ನ ಛಾವಣಿ ಕಳಚಿ ಬಿದ್ದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಂಕಣ ತೀರದ ಉಳಿದ ಸಂಸದರೂ ಈ ಬೇಡಿಕೆಗೆ ಜತೆಯಾಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.