ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕೋವಿಡ್ ಕೊರೊನಾ ಸೋಂಕಿತರಿಗೆ ತುರ್ತು ಅಗತ್ಯವಾಗಿರುವ ರೆಮ್ ಡೆಸಿವಿಯರ್ ಲಸಿಕೆ ಪೂರೈಕೆಯಲ್ಲಿ ಹಲವು ರಾಜ್ಯಗಳಿಗೆ, ಅದರಲ್ಲೂ ಕರ್ನಾಟಕಕ್ಕೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ದೂರಿದ್ದಾರೆ.
ಗುರುವಾರ ತಾವು ಅಧ್ಯಕ್ಷರಾಗಿರುವ ಬಿಎಲ್‌ಡಿಇ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಚಿಕಿತ್ಸಾ ಸೌಲಭ್ಯ ಪರಿಶೀಲಿಸಿ ಮಾತನಾಡಿದ ಅವರು, ತಾರತಮ್ಯ ನಿವಾರಣೆ ಕುರಿತು ಪ್ರಧಾನಿ, ಕೇಂದ್ರ ಆರೋಗ್ಯ ಸಚಿವ, ಸಿ.ಎಂ, ರಾಜ್ಯದ ಆರೋಗ್ಯ ಸಚಿವರಿಗೆ ಟ್ವೀಟ್ ಮೂಲಕ ಗಮನ ಸೆಳೆಯುವುದಾಗಿ ಹೇಳಿದರು. ಕರ್ನಾಟಕದಲ್ಲಿ ಹೊಸದಾಗಿ 40 ಸಾವಿರ, ಛತ್ತೀಸಗಡ ರಾಜ್ಯದಲ್ಲಿ 15 ಸಾವಿರ, ಗುಜರಾತ್ 14 ಸಾವಿರ ಹೊಸ ಕೊರೊನಾ ಪ್ರಕರಣ ದಾಖಲಾಗಿವೆ. ಆದರೆ ಕೇಂದ್ರ ಸರ್ಕಾರ ರೆಮ್ ಡೆಸಿವಿಯರ್ ಪೂರೈಕೆಯಲ್ಲಿ ಏ. 21ರಿಂದ 30ರವರೆಗೆ 10 ದಿನಗಳ ಅವಧಿಗೆ ಗುಜರಾತ ರಾಜ್ಯಕ್ಕೆ 1,63,559, ಛತ್ತೀಸಗಡಕ್ಕೆ 48,250 ಲಸಿಕೆ ನೀಡಿದೆ.
ಕರ್ನಾಟಕಕ್ಕೆ ಕೇವಲ 25,352 ರೆಮ್ ಡೆಸಿವಿಯರ್ ಲಸಿಕೆ ನೀಡುವ ಮೂಲಕ ತಾರತಮ್ಯ ಮಾಡುತ್ತಿದೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಲಸಿಕೆ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯ ಪ್ರವೇಶಿಸಿ ಲಸಿಕೆ ತಾರತಮ್ಯ ನಿವಾರಿಸಬೇಕು ಎಂದು ಆಗ್ರಹಿಸಿದರು. ಅತಿ ಕಡಿಮೆ ಶುಲ್ಕ ಪಡೆದು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಿಎಲ್ ಡಿಇ ಆಸ್ಪತ್ರೆಗೆ ನಿನ್ನೆ 382 ಇಂಜಕ್ಷನ್‌ಗಳು ಬಂದಿದ್ದು ಎಲ್ಲವೂ ಖಾಲಿಯಾಗಿವೆ.
ಇಂದು 482 ಇಂಜಕ್ಷನ್‌ಗಳು ಬಂದಿದ್ದು ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇಂಜಕ್ಷನ್ ನೀಡಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಬಿಎಲ್‌ಡಿಇ ಆಸತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಈಗಿರುವ 13 ಕೆಎಲ್ ಸಾಮರ್ಥಯದ ಘಟಕದೊಂದಿಗೆ ಇನ್ನೂ 13 ಕೆಎಲ್ ಸಾಮರ್ಥ್ಯದ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದೆ. ಈ ಕುರಿತು ಯುದೊœàಪಾದಿಯಲ್ಲಿ ಕೆಲಸ ಮುಗಿಸಿ ಬರುವ 15 ದಿನಗಳಲ್ಲಿ ನೂತನ ಘಟಕ ನಿರ್ಮಿಸಿ, ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದಲ್ಲದೇ ತುರ್ತಾಗಿ 100 ಜಂಬೋ ಆಕ್ಸಿಜನ್ ಸಿಲಿಂಡರ್ ತರಿಸಿ ಬಳಕೆ ಮಾಡಲಾಗುತ್ತಿದೆ ಎಂದರು. ಆಸ್ಪತ್ರೆಗೆ ನಿತ್ಯವೂ ಹೆಚ್ಚಿನ ರೋಗಿಗಳು ದಾಖಲಾಗಲು ಬರುತ್ತಿರುವರಲ್ಲಿ ರೋಗ ಇರುವ, ಅಗತ್ಯ ಇರುವವರಿಗೆ ಮಾತ್ರ ಒಳ ರೋಗಿಯಾಗಿ ದಾಖಲೆ ಮಾಡಬೇಕು. ಮನೆಯಲ್ಲಿ ಆರೈಕೆ ಅಗತ್ಯ ಇರುವವರನ್ನು ಆಸ್ಪತ್ರೆಗೆ ದಾಖಲಿಸದೇ ವೈದ್ಯಕೀಯ ಸಲಹೆ, ಚಿಕಿತ್ಸೆ, ಔಷಧಿ ನೀಡಬೇಕು. ಇದರಿಂದ ತುರ್ತು ಹಾಗೂ ಗಂಭೀರ ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ರಕ್ಷಿಸಲು ನೆರವಾಗುತ್ತದೆ.
ಗಂಭೀರ ಸ್ವರೂಪದಲ್ಲಿ ದಾಖಲಾದ ರೋಗಿಗೆ ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಲ್ಲಿ ಡಿಸಾcರ್ಜ್ ಮಾಡಬೇಕು ಎಂದು ಸೂಚಿಸಿದರು. ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಗಳ ಚಿಕಿತ್ಸೆಗೆ ಅನಕೂಲವಾಗಲು ಬಿಎಲ್‌ಡಿಇ ಸಂಸ್ಥೆ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜಿನ ನುರಿತ ಸಿಬ್ಬಂದಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆ ಬಳಸಿಕೊಳ್ಳಲು ನಿರ್ಧರಿಸಲಾಯಿತು. ಗುಣಮುಖರಾದವರಿಗೆ ಆಸ್ಪತ್ರೆಯಲ್ಲೇ μàಜಿಯೋಥೆರಪಿ ಸೌಲಭ್ಯ ಒದಗಿಸಲಾಗುತ್ತಿದ್ದು, ಇದರಿಂದ ಉತ್ತಮ ಫಲಿತಾಂಶ ಕಂಡು ಬಂದಿದೆ ಎಂದು ಎಂ.ಬಿ. ಪಾಟೀಲ ಹೇಳಿದರು. ಬಿಎಲ್‌ಡಿಇ ವಿವಿ ಸಮ ಕುಲಪತಿ ಡಾ| ಆರ್.ಎಸ್. ಮುಧೋಳ, ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ| ಅರವಿಂದ ಪಾಟೀಲ, ಆಸ್ಪತ್ರೆ ಅಧಿಧೀಕ್ಷಕ ಡಾ| ರಾಜೇಶ ಹೊನ್ನುಟಗಿ, ರಿಜಿಸ್ಟಾರ್ ಡಾ| ಜೆ.ಜಿ. ಅಂಬೇಕರ್, ಸಂಸ್ಥೆ ಆಡಳಿತಾ ಧಿಕಾರಿ ಡಾ|ರಾಘವೇಂದ್ರ ಕುಲಕರ್ಣಿ, ಪ್ರಚಾರಾಧಿ ಕಾರಿ ಡಾ| ಮಹಾಂತೇಶ ಬಿರಾದಾರ ಇದ್ದರು