“ಹ್ಯಾಪಿ ನ್ಯೂ ಇಯರ್’ ಚಿತ್ರದ ಮೂಲಕ ಬಿ.ಸಿ.ಪಾಟೀಲ್ ಮತ್ತೆ ನಿರ್ಮಾಪಕರಾಗಿ ವಾಪಾಸ್ ಬಂದಿದ್ದಾರೆ. “ಸೆಲ್ಯೂಟ್’ ಆದ ನಂತರ ಪಾಟೀಲ್ ಯಾವುದೇ ಸಿನಿಮಾ ನಿರ್ಮಿಸಿಲ್ಲ. ಈಗ “ಹ್ಯಾಪಿ ನ್ಯೂ ಇಯರ್’ ಮಾಡಿದ್ದಾರೆ. ಇದು ಅವರ ನಿರ್ಮಾಣದ 15 ನೇ ಸಿನಿಮಾ. ಪಾಟೀಲರು ಮತ್ತೆ ಸಿನಿಮಾ ಮಾಡಲು ಕಾರಣ ಜನಗಳ ಪ್ರೀತಿಯಂತೆ. ಒಂದೇ ಒಂದು ದಿನಕ್ಕೂ ಜನ ಮತ್ತೆ ಯಾವಾಗ ಚುನಾವಣೆಗೆ ನಿಲ್ತಿàರಾ ಅಂತಾಗಲೀ ಅಥವಾ ಬೇರೆ ಪ್ರಶ್ನೆಯನ್ನಾಗಲೀ ಕೇಳುವುದಿಲ್ಲ.
ಎಲ್ಲರೂ ನಾನ್ಯಾಕೆ ಸಿನಿಮಾ ಮಾಡುತ್ತಿಲ್ಲ ಅಂತ ಕೇಳುತ್ತಾರೆ. ಹಾಗಾಗಿ ಚಿತ್ರರಂಗದಿಂದ ದೂರ ಉಳಿಯಬಾರದು ಎಂಬ ಕಾರಣಕ್ಕೆ ಮತ್ತೆ ಸಿನಿಮಾ ಮಾಡುವುದಕ್ಕೆ ಬಂದಿದ್ದೇನೆ’ ಎಂದು ತಾವು ನಿರ್ಮಾಣಕ್ಕೆ ವಾಪಾಸಾದ ಬಗ್ಗೆ ಹೇಳುತ್ತಾರೆ ಪಾಟೀಲ್. ಎಲ್ಲಾ ಓಕೆ, ಪನ್ನಗಭರಣ ಅವರಿಂದ ಸಿನಿಮಾ ಮಾಡಿಸಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದರ ಹಿಂದಿನ ಸ್ವಾರಸ್ಯರಕರ ಕಥೆಯನ್ನು ಬಿ.ಸಿ.ಪಾಟೀಲ್ ಹೇಳುತ್ತಾರೆ.
“ನಾನು ಸಿನಿಮಾ ಬದಲು ಹಳ್ಳಿಯ ಸೊಗಡಿನ ಯಾವುದಾದರೂ ಧಾರಾವಾಹಿ ಮಾಡೋಣ ಅಂತ ಅವರನ್ನ ಭೇಟಿಯಾದೆ. ಅವರು ಬಿಝಿ ಇದ್ದರು ಅಂತ ಕಾಣುತ್ತೆ. ನನ್ನ ಮಗನನ್ನು ಕೇಳಿ, ಅವನ ಹತ್ರ ಒಂದಿಷ್ಟು ಕಥೆಗಳಿವೆ ಎಂದರು. ಓಕೆ ಅಂದೆ. ಒಂದು ದಿನ ಪನ್ನಗ ಮನೆಗೆ ಬಂದರು. ಒಂದೊಂದಾಗಿ ನಾಲ್ಕೈದು ಕಥೆಗಳನ್ನ ಹೇಳಿದರು. ಅದರಲ್ಲಿ ಈ ಕಥೆ ನಮಗೆಲ್ಲರಿಗೂ ತುಂಬಾ ಇಷ್ಟ ಆಯ್ತು. ಈಗಿನ ಟ್ರೆಂಡ್‌ಗೆ ಕಥೆ ಇದೆ. ನನ್ನ ಹೆಂಡತಿ ಒಳ್ಳೆಯ ಜಡು. ಅವರು ಒಪ್ಪಿದರು.
ಮಗಳು ಒಪ್ಪಿದಳು. ಸರಿ ಚಿತ್ರ ಮಾಡೋಕೆ ಹೊರಟೀವಿ’ ಎಂದು ಪನ್ನಗ ಜೊತೆ ಸಿನಿಮಾ ಮಾಡಿದ ಬಗ್ಗೆ ಹೇಳುತ್ತಾರೆ ಬಿ.ಸಿ.ಪಾಟೀಲ್. ಐದು ಕಥೆಗಳನ್ನು ಚೆನ್ನಾಗಿ ಮೌಲ್ಡ್ ಮಾಡಿ ಈ ಸ್ಕ್ರಿಪ್ಟ್ ಮಾಡಿದ್ದಾರೆ. ಒಂದು ಟಿಕೆಟ್ ತೆಗೆದುಕೊಂಡರೆ, ಐದು ಸಿನಿಮಾ ನೋಡಿದ ಅನುಭವ ಪ್ರೇಕ್ಷಕನಿಗೆ ಆಗುತ್ತೆ ಅಂತ ಹೇಳಲು ಪಾಟೀಲರು ಮರೆಯುವುದಿಲ್ಲ. “ಹ್ಯಾಪಿ ನ್ಯೂ ಇಯರ್’ ಟೈಟಲ್‌ನಂತೆ ಚಿತ್ರದಲ್ಲೊಂದು ಒಳ್ಳೆಯ ಪಾರ್ಟಿ ಸಾಂಗ್ ಬೇಕೆಂಬ ಆಸೆ ಪಾಟೀಲರಿಗಿತ್ತಂತೆ. ಅದು ಕೂಡಾ ಈಗ ಈಡೇರಿದೆ.
“ಚಿತ್ರದಲ್ಲಿ ತುಂಬಾ ಜನ ಕಲಾವಿದರಿದ್ದಾರೆ. ಆದರೆ, ಎಲ್ಲರಿಗೂ ಒಟ್ಟಿಗೆ ಸೇರುವ ಅವಕಾಶ ಸಿಕ್ಕಿರಲಿಲ್ಲ. ನ್ಯೂ ಇಯರ್ ಹಾಡಿನ ಮೂಲಕ ಆ ಅವಕಾಶ ಸಿಕ್ಕಿದೆ. ನಾವೆಲ್ಲರೂ ಆ ಹಾಡಿನಲ್ಲಿ ಕಾಣಿಸಿಕೊಂಡಿದ್ದೇವೆ. ನನಗೊಂದು ಆಸೆ ಇತ್ತು, ನ್ಯೂ ಇಯರ್‌ಗೆ ಒಂದು ಒಳ್ಳೆಯ ಪಾರ್ಟಿ ಸಾಂಗ್ ಕೊಡಬೇಕೆಂದು. ಮದುವೆ, ಪ್ರೀತಿಗೆ … ಎಲ್ಲದಕ್ಕೂ ಬೇರೆ ಬೇರೆ ಹಾಡುಗಳಿವೆ. ಆದರೆ, ಕನ್ನಡದಲ್ಲಿ ನ್ಯೂ ಇಯರ್ ಪಾರ್ಟಿಗೆ ಒಂದು ಒಳ್ಳೆಯ ಹಾಡು ಇರಲಿಲ್ಲ. ಈಗ ಅದನ್ನು ನಾವು ಕೊಟ್ಟಿದ್ದೇವೆ. ಆ ಹಾಡಿಗೂ ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುವುದು ಬಿ.ಸಿ.ಪಾಟೀಲ್ ಮಾತು.