Advertisement
ಇದರಿಂದ ಗ್ರಾಮೀಣ ಭಾಗದ ಜನರಿಗೆ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಪರಾಡುವಂತಾಗಿದೆ. ಈ ಮೊದಲು ತಾಲೂಕು ಕೇಂದ್ರಕ್ಕೆ 30 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದರಂತೆ ತಾಳಿಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೂ ಕೂಡಾ 108 ವಾಹನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ 04-10-2020ರಂದು ಮನಗೂಳಿ ಹತ್ತಿರ ನಡೆದ ಅಪಘಾತದಿಂದಾಗಿ ಬೆಳಗಾವಿಯ ಗ್ಯಾರೇಜ್ ಸೇರಿಕೊಂಡ ಆಂಬ್ಯುಲೆನ್ಸ್ ರಿಪೇರಿಯ ದುಡ್ಡು ಕಟ್ಟಲಾಗದಿದ್ದಕ್ಕೆ ಅಲ್ಲಿಯೇ ನಿಂತಿದೆ.
Related Articles
Advertisement
ಜಿಲ್ಲೆಯಲ್ಲಿವೆ 32 ವಾಹನ: ಜಿಲ್ಲೆಯಲ್ಲಿ ಒಟ್ಟು 32 ಆಂಬ್ಯುಲೆನ್ಸ್‌ಗಳಿದ್ದು ಅದರಲ್ಲಿ ಈಗಾಗಲೇ 8 ವಾಹನಗಳು ದುರಸ್ತಿ ಕಾಣದೇ ಜಿಲ್ಲಾ ಆಸ್ಪತ್ರೆಯಲ್ಲಿತುಕ್ಕು ಹಿಡಿಯುತ್ತಿದ್ದರೆ, ಇನ್ನೂ ಕೆಲವು ವಾಹನಗಳುತಾಲೂಕು ಕೇಂದ್ರಗಳಲ್ಲಿ ತುಕ್ಕು ಹಿಡಿಯುತ್ತ ನಿಂತಿವೆ.ಹಣ ತೆರುವ ಪರಿಸ್ಥಿತಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಗು ಮಗು ಮತ್ತು ಜನನಿ ಸುರಕ್ಷಾ ಯೋಜನೆಯ ಎರಡು ಆಂಬ್ಯುಲೇನ್ಸ್‌ಗಳಿವೆ. ಅವುಗಳಲ್ಲಿ ನಗುಮಗು ಗರ್ಭಿಣಿಯರನ್ನು, ತಾಯಿ ಮಗುವನ್ನು ಮನೆಗೆ ಮತ್ತು ಆಸ್ಪತ್ರೆಗೆ ಕರೆದುಕೊಂಡು ಬರಲು ಮೀಸಲಿಡಲಾಗಿದೆ.
ಇನ್ನೊಂದು ಜನನಿ ಸುರಕ್ಷಾದ ವಾಹನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಿಟ್ಟು ಬರುವಂತಹದ್ದಾಗಿದೆ. ಆದರೆ ಜನನಿ ಸುರಕ್ಷಾ ವಾಹನದ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಈ ವಾಹನದಲ್ಲಿ ಪ್ರಥಮ ಚಿಕಿತ್ಸೆಯಾಗಲಿ, ಸ್ಟಾಫ್‌ನರ್ಸ್ ಆಗಲಿ ಇರಲ್ಲ. ಕೇವಲ ಚಾಲಕನ ಮೇಲೆ ನಿರ್ವಹಣೆಯಾಗುತ್ತಿದೆ. ಇದರಿಂದ ಹಣ ತೆತ್ತು ಬೇರೆ ವಾಹನದಲ್ಲಿ ಹೋಗುವಂತಾಗಿದೆ ಎಂದು ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ವಾಹನ ಒದಗಿಸುವ ಕುರಿತು ಜಿವಿಕೆಇಎಂಆರ್ ನಿರ್ವಹಣಾ ಸಂಸ್ಥೆಗೆಪತ್ರ ಬರೆದಿದ್ದೇನೆ. ವಾಹನ ಚಲಾಣೆಯಾಗದೇವಾಹನ ಚಲಾವಣೆಯಲ್ಲಿದೆ ಎಂದು ಆನ್‌ಲೈನ್‌ನಲ್ಲಿ ತೋರಿಸುತ್ತಿರುವುದು ಗಮನಕ್ಕೆ ಬಂದಿಲ್ಲ.ಕೂಡಲೇ ಮಾಹಿತಿ ಪಡೆದು ನಿರ್ವಹಣಾ ಸಂಸ್ಥೆ ಮೇಲೆ ಕ್ರಮಕ್ಕೆ ಕಮಿಷನರ್‌ಗೆ ಪತ್ರಬರೆಯುತ್ತೇನೆ. -ಮಹೇಂದ್ರ ಕಾಪ್ಸೆ ಡಿಎಚ್‌ಒ, ವಿಜಯಪುರ
-ಜಿ.ಟಿ. ಘೋರ್ಪಡೆ