ಹರಿದ್ವಾರ: ವಿಶ್ವವಿಖ್ಯಾತ ಯೋಗಗುರು ಬಾಬಾ ರಾಮ್‌ದೇವ್ ಮಾರಕ ಕೊರೊನಾ ರೋಗಕ್ಕೆ ಔಷಧ ಬಿಡುಗಡೆ ಮಾಡಿದ್ದಾರೆ. ಇದು ರೋಗ ನಿವಾರಣೆ ಮಾಡುವ ಗುಣ ಹೊಂದಿರುವುದಕ್ಕೆ ಸಾಕ್ಷ್ಯವಿದೆ ಎಂದು ಅವರು ಪ್ರತಿಪಾದಿಸಿ ದ್ದಾರೆ. ಅಲ್ಲದೇ ಔಷಧ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳಿಗನುಗುಣವಾಗಿ ನೀಡುವ ಕಾಪ್ (ದ ಸರ್ಟಿಫಿಕೇಟ್ ಆಫ್ ಎ ಫಾರ್ಮಾಸ್ಯುಟಿಕಲ್ ಪ್ರಾಡಕ್ಟ್) ಪ್ರಮಾಣ ಪತ್ರವನ್ನೂ ಅವರು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ಆರೋಗ್ಯ ಡಾ| ಹರ್ಷವರ್ಧನ್ ಕೂಡಾ ಪಾಲ್ಗೊಂಡಿದ್ದರು.
ಈ ವೇಳೆ, ಕೋವಿಡ್ ನ್ನು ಗುಣ ಮಾಡುವ ಔಷಧದ ಸಾಮರ್ಥ್ಯವನ್ನು ತಿಳಿಸುವ ಸಂಶೋ ಧನಾ ಲೇಖನವನ್ನೂ ಪ್ರಸ್ತುತಪಡಿಸಿದರು. ಇದರ ಮೂಲಕ ಮತ್ತೂಮ್ಮೆ ಪತಂಜಲಿ ಸಂಸ್ಥೆ ಎಲ್ಲರ ಗಮನದ ಕೇಂದ್ರಬಿಂದುವಾಗಿದೆ. ಆದರೆ ಇದರ ಪ್ರಾಯೋಗಿಕ ಫಲಿತಾಂಶ ಜನರ ಬಳಕೆಯ ಅನಂತರವಷ್ಟೇ ಗೊತ್ತಾಗಲಿದೆ.
ವಿವಾದ ಕೆರಳಿಸಿದ್ದ ಕೊರೊನಿಲ್ :
ಕಳೆದ ವರ್ಷ ದೇಶಾದ್ಯಂತ ಕೋವಿಡ್ ತೀವ್ರವಾಗಿದ್ದಾಗ ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಕೊರೊನಿಲ್ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿತ್ತು. ಇದು ಕೋವಿಡ್ ಗುಣಪಡಿಸುತ್ತದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಈ ಪ್ರಚಾರದ ವಿರುದ್ಧ ಹಲವರು ನ್ಯಾಯಾಲಯದ ಮೊರೆಹೋದರು. ಕಡೆಗೆ ಕೇಂದ್ರ ಆಯುಷ್ ಇಲಾಖೆ, ಕೊರೊನಿಲ್ ಅನ್ನು ಕೊರೊನಾ ನಿವಾರಕ ಎಂದು ಪ್ರಚಾರ ಮಾಡದೇ, ರೋಗನಿರೋಧಕ ಶಕ್ತಿವರ್ಧಕ ಎಂದು ಮಾರಬೇಕು ಎಂಬ ಆದೇಶ ಹೊರಡಿಸಿತ್ತು.