ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ನಟನೆಯ “ಪಠಾಣ್’ ಹಿಂದಿ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್‌ನಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶನದ “ಬಾಹುಬಲಿ 2′ ಹಿಂದಿ ಅವತರಣಿಕೆಯ ಗಳಿಕೆಯನ್ನೂ ಹಿಂದಿಕ್ಕಿದೆ.
2017ರಲ್ಲಿ ಬಿಡುಗಡೆಯಾದ “ಬಾಹುಬಲಿ 2′ ಹಿಂದಿ ಅವತರಣಿಕೆಯಲ್ಲಿ ಕೇವಲ 38 ದಿನಗಳಲ್ಲಿ 510.99 ಕೋಟಿ ರೂ. ಗಳಿಸಿತ್ತು. ಇದೀಗ “ಪಠಾಣ್’ ಸಿನಿಮಾ ಗಳಿಕೆಯಲ್ಲಿ ಈ ದಾಖಲೆಯನ್ನು ಸರಿಗಟ್ಟಿದೆ. ಇದರ ನಂತರ ಕ್ರಮವಾಗಿ “ಕೆಜಿಎಫ್-2′ ಹಿಂದಿ ಅವತರಣಿಕೆ ಹಾಗೂ ದಂಗಲ್ ಸಿನಿಮಾಗಳು ಇವೆ.
ಸಿದ್ಧಾಥ್ ಆನಂದ್ ನಿರ್ದೇಶನದ “ಪಠಾಣ್’ ಸಿನಿಮಾ ವಿಶ್ವಾದ್ಯಂತ ಗಳಿಕೆಯಲ್ಲಿ ಅಂದಾಜು 1,026 ಕೋಟಿ ರೂ. ಗಳಿಸಿದೆ.