Advertisement

ಹಕ್ಕುಪತ್ರ ದೊರಕಿಸಲು ಯತ್ನ: ಶ್ರೀನಿವಾಸ

12:54 PM Feb 07, 2017 | |

ಹುಬ್ಬಳ್ಳಿ: ಮುಂಬರುವ ದಿನಗಳಲ್ಲಿ ಸರಕಾರದಿಂದ ಕೊಳಗೇರಿ ನಿವಾಸಿಗಳಿಗೆಲ್ಲ ಹಕ್ಕುಪತ್ರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.

Advertisement

ಇಲ್ಲಿನ ಮೂರುಸಾವಿರ ಮಠ ಹಿಂಭಾಗದ ಜಿ ಅಡ್ಡಾದಲ್ಲಿ ಗುರುದತ್ತ ಸೇವಾ ಮಂಡಳದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಭಾಗವನ್ನು 1977ರಲ್ಲೆ ಕೊಳಚೆ ಪ್ರದೇಶವೆಂದು ಘೋಷಿಸಲಾಗಿತ್ತು. ಆದರೆ 41 ವರ್ಷಗಳಿಂದ ಈ ಭಾಗದ ನಿವಾಸಿಗಳಿಗೆ ಪರಿಚಯ ಪತ್ರ ನೀಡಿರಲಿಲ್ಲ.

ಇದರಿಂದಾಗಿ ಸ್ಥಳೀಯ ಜನರಲ್ಲಿ ಅಭದ್ರತೆಯ ಆತಂಕ ಮೂಡಿತ್ತು. ಆದರೆ ಇಲ್ಲಿನ ಜನರ ಕಷ್ಟಗಳನ್ನು ಅರಿತ ಯುವ ಮುಖಂಡ ಪ್ರಕಾಶ ಬುರಬುರೆ ಕಳೆದ 3 ವರ್ಷಗಳಿಂದ ಎಲ್ಲ ನಿವಾಸಿಗಳ ಮನೆ-ಮನೆಗೆ ತೆರಳಿ ಈ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಜನರಲ್ಲಿದ್ದ ಅಭದ್ರತೆಯ ಭಯ ನಿವಾರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದರ ಪರಿಣಾಮವಾಗಿ ಹಾಗೂ ಸತತ ಪ್ರಯತ್ನದ ಫಲವಾಗಿ ನಿವಾಸಿಗಳಿಗೆ ಪರಿಚಯ ಪತ್ರ ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸೇವಾ ಮಂಡಳದಿಂದ ಪ್ರಕಾಶ ಬುರಬುರೆ ಅವರನ್ನು ಸನ್ಮಾನಿಸಲಾಯಿತು. ಎಂ.ವಿ. ಹಬೀಬ, ರಾಜೇಸಾಬ ಪಿಂಜಾರ, ಮುತವಲ್ಲಿ ಮೆಹಬೂಬಸಾಬ ಗಬ್ಬೂರ, ಭೀಮಣ್ಣ ಕಲಬುರ್ಗಿ, ಮೋಹನಸಾ ಕಠಾರೆ, ಲಕ್ಷ್ಮಣಸಾ ಕಾಟೀಕರ, ಸಂಜು ಸಾಠೆ, ಪ್ರಕಾಶ ಹಬೀಬ, ಎಸ್‌.ಆರ್‌. ಕಂಪ್ಲಿ, ಗಡ್ಡಾಪುರಮಠ ಮೊದಲಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next