ಮೆಲ್ಬೋರ್ನ್: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ಟಿಮ್ ಪೇನ್ ರಾಜೀನಾಮೆ ನೀಡಿದ ಬಳಿಕ ನೂತನ ನಾಯಕನ ನೇಮಕವಾಗಿದೆ. ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಅವರನ್ನು ಆಸೀಸ್ ಟೆಸ್ಟ್ ತಂಡಕ್ಕೆ ನಾಯಕನನ್ನಾಗಿ ನೇಮಿಸಿದ್ದು, ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ.
“ಐದು ವ್ಯಕ್ತಿಗಳ ಆಯ್ಕೆ ಬೋರ್ಡ್ ನೊಂದಿಗೆ ಸಂದರ್ಶನ ಪ್ರಕ್ರಿಯೆಯ ನಂತರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಪೂರ್ಣ ಮಂಡಳಿಯಿಂದ ಅನುಮೋದನೆ ಪಡೆದ ನಂತರ, ಕಮಿನ್ಸ್ ಇಂದು ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾದ ಪುರುಷರ ಟೆಸ್ಟ್ ತಂಡದ ಪೂರ್ಣಾವಧಿಯ ನಾಯಕರಾದ ಮೊದಲ ವೇಗದ ಬೌಲರ್ ಮತ್ತು ರಿಚಿ ಬೆನಾಡ್ ರ ಬಳಿಕ ಯಾವುದೇ ರೀತಿಯ ತಂಡದ ನಾಯಕರಾದ ಮೊದಲ ಬೌಲರ್ ಆಗಿದ್ದಾರೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಇಂಡೋನೇಶ್ಯ ಓಪನ್: ಕ್ವಾರ್ಟರ್ ಫೈನಲ್‌ಗೆ ಸಿಂಧು
ನಂ.1 ಟೆಸ್ಟ್ ಬೌಲರ್ ಆಗಿರುವ ಕಮಿನ್ಸ್ ಅವರು “ಆಶಸ್‌ಗಿಂತ ಮೊದಲು ಟೆಸ್ಟ್ ನಾಯಕನ ಪಾತ್ರವನ್ನು ಸ್ವೀಕರಿಸುವುದು ನನಗೆ ಗೌರವ” ಎಂದು ಹೇಳಿದ್ದಾರೆ.
Related Articles
“ಕಳೆದ ಕೆಲವು ವರ್ಷಗಳಲ್ಲಿ ಟಿಮ್ ಪೇನ್ ಅವರು ತಂಡಕ್ಕೆ ನೀಡಿದ ಅದೇ ನಾಯಕತ್ವವನ್ನು ನಾನು ನೀಡಬಹುದೆಂದು ನಾನು ಭಾವಿಸುತ್ತೇನೆ” ಎಂದು ಕಮಿನ್ಸ್ ಹೇಳಿಕೊಂಡಿದ್ದಾರೆ.