Advertisement

ಪಾಸ್‌ ಪೋರ್ಟ್‌ ಇನ್ನು ಇಂಗ್ಲಿಷ್‌,ಹಿಂದಿ ಎರಡರಲ್ಲೂ ಇರುತ್ತೆ :ಸುಶ್ಮಾ

04:01 PM Jun 23, 2017 | Team Udayavani |

ಹೊಸದಿಲ್ಲಿ : ಪಾಸ್‌ ಪೋರ್ಟ್‌ಗಳನ್ನು ಇನ್ನು ಮುಂದೆ ಇಂಗ್ಲಿಷ್‌ನಲ್ಲಿ ಮಾತ್ರವಲ್ಲ; ಇಂಗ್ಲಿಷ್‌ – ಹಿಂದಿ ಎರಡೂ ಭಾಷೆಯಲ್ಲಿ ಕೊಡಲಾಗುತ್ತದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಇಂದು ಶುಕ್ರವಾರ ಪ್ರಕಟಿಸಿದ್ದಾರೆ. 

Advertisement

ಎಂಟರ ಕೆಳ ಹರೆಯದವರು ಮತ್ತು 60 ವರ್ಷ ಮೀರಿದವರಿಗೆ ಪಾಸ್‌ ಪೋರ್ಟ್‌ ಶುಲ್ಕದಲ್ಲಿ ಇನ್ನು ಮುಂದೆ ಶೇ.10ರಷ್ಟು ರಿಯಾಯಿತಿ ಇದೆ ಎಂದೂ ಸುಶ್ಮಾ ಹೇಳಿದರು.

ಪಾಸ್‌ ಪೋರ್ಟ್‌ ನಲ್ಲಿ ಪ್ರಕೃತ ವೈಯಕ್ತಿಕ ಮಾಹಿತಿಗಳೆಲ್ಲ ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುತ್ತಿದೆ. 

1967ರ ಪಾಸ್‌ ಪೋರ್ಟ್‌ ಕಾಯಿದೆಗೆ 50 ವರ್ಷ ತುಂಬಿದ ಪ್ರಯುಕ್ತ ನಡೆಸಲಾದ ಸಮಾರಂಭದಲ್ಲಿ  ಮಾತನಾಡುತ್ತಾ ಸುಶ್ಮಾ ಸ್ವರಾಜ್‌ ಈ ವಿಷಯಗಳನ್ನು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next