Advertisement
ಕಳೆದ ವರ್ಷ ಭಾರತ 84ನೇ ಸ್ಥಾನದಲ್ಲಿತ್ತು. 58 ಅಂಕಗಳು ಎಂದರೆ ನಮ್ಮ ದೇಶದ ಪಾಸ್‌ಪೋರ್ಟ್ ಹೊಂದಿದವರು ಪೂರ್ವ ನಿಗದಿತ ವೀಸಾ ಇಲ್ಲದೆ 58 ದೇಶಗಳಿಗೆ ಭೇಟಿ ನೀಡಲು ಸಾಧ್ಯವಿದೆ. ಈ ಶ್ರೇಯಾಂಕದ ಪಟ್ಟಿಯಲ್ಲಿ ಜಪಾನ್ ನಂ.1 ಸ್ಥಾನದಲ್ಲಿದೆ. ಅದು 191 ಅಂಕಗಳನ್ನು ಪಡೆದು ಸತತ ಮೂರು ವರ್ಷಗಳಿಂದ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ ಎಂದು ಹೆನ್ಲ ಆ್ಯಂಡ್ ಪಾರ್ಟ್‌ನರ್ಸ್ ಪಾಸ್‌ಪೋರ್ಟ್ ಇಂಡೆಕ್ಸ್ 2021ರಲ್ಲಿ ಅಭಿಪ್ರಾಯಪಡಲಾಗಿದೆ. ಒಟ್ಟು 190 ಅಂಕಗಳನ್ನು ಪಡೆದಿರುವ ಸಿಂಗಾಪುರ ದ್ವಿತೀಯ, ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಮತ್ತು ಜರ್ಮನಿ, ಫಿನ್ಲಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ 4ನೇ ಸ್ಥಾನದಲ್ಲಿವೆ. ಜಗತ್ತಿನ ಅತ್ಯಂತ ಪ್ರಬಲ ಮತ್ತು ಶ್ರೀಮಂತ ರಾಷ್ಟ್ರಗಳು ಎನಿಸಿಕೊಂಡಿರುವ ಅಮೆರಿಕ ಮತ್ತು ಯು.ಕೆ.ಯ ಪಾಸ್‌ಪೋರ್ಟ್‌ಗಳಿಗೆ 7ನೇ ಸ್ಥಾನ. ಅವುಗಳ ಜತೆಗೆ ಬೆಲ್ಜಿಯಂ, ನ್ಯೂಜಿಲೆಂಡ್, ನಾರ್ವೆ, ಸ್ವಿಟ್ಸರ್ಲೆಂಡ್ ಇವೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ಥಾನ 107, ನೇಪಾಲ 104ನೇ ಸ್ಥಾನದಲ್ಲಿವೆ. ಅಫ್ಘಾನಿಸ್ಥಾನ ಈ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. Advertisement
ಪಾಸ್‌ಪೋರ್ಟ್ ಶ್ರೇಯಾಂಕ: 85ನೇ ಸ್ಥಾನ ಪಡೆದ ಭಾರತ
01:47 AM Jan 13, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.