Advertisement

ಉಡುಪಿಗೆ ಬರಲಿದೆ ಪಾಸ್‌ಪೋರ್ಟ್‌ ಕಚೇರಿ

11:42 AM Jun 22, 2017 | Team Udayavani |

ಉಡುಪಿ: ದೇಶದ 189 ಕಡೆ ಹೆಚ್ಚುವರಿಯಾಗಿ ಅಂಚೆ ಇಲಾಖೆ ಸಹಯೋಗದಲ್ಲಿ ಆರಂಭಿಸುವ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲಿ ಉಡುಪಿಯೂ ಒಂದಾಗಿದೆ. 

Advertisement

ಇದುವರೆಗೆ ಮಂಗಳೂರು ಪಾಸ್‌ಪೋರ್ಟ್‌ ಕಚೇರಿ ವ್ಯಾಪ್ತಿಯಲ್ಲಿ ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉ.ಕ., ದ.ಕ. ಜಿಲ್ಲೆಗಳಿದ್ದು ಇವರು ಮಂಗಳೂರು ಕಚೇರಿಗೆ ಪಾಸ್‌ಪೋರ್ಟ್‌ ಕೆಲಸಕ್ಕೆ ಹೋಗಬೇಕಿತ್ತು. ಇನ್ನು ಮುಂದೆ ಉಡುಪಿ ಜಿಲ್ಲೆಯವರಿಗೆ ಉಡುಪಿ ಯಲ್ಲಿಯೇ ಪಾಸ್‌ಪೋರ್ಟ್‌ ಕೆಲಸಗಳು ಆಗಲಿವೆ. ಕೆಲವು ವರ್ಷಗಳ ಹಿಂದೆ ಉಡುಪಿ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ದಾಖಲೆ ಗಳನ್ನು ಸ್ವೀಕರಿಸಿ ಬೆಂಗಳೂರು ಪಾಸ್‌ ಪೋರ್ಟ್‌ ಕಚೇರಿಗೆ ಕಳುಹಿಸುವ ಸೌಲಭ್ಯ ವಿತ್ತು. ಆದರೆ ಬಯೋಮೆಟ್ರಿಕ್‌ ವ್ಯವಸ್ಥೆ ಬಂದ ಬಳಿಕ ಇದು ನಿಂತು ಹೋಗಿ ಮತ್ತೆ ಮಂಗಳೂರಿನತ್ತ ಪ್ರಯಾಣ ಬೆಳೆಸಬೇಕಾ ಯಿತು. ಮಂಗಳೂರು ಕಚೇರಿಯಲ್ಲಿ ವಿವಿಧ ಜಿಲ್ಲೆಗಳಿಂದ ಜನರು ಬರುತ್ತಿರುವುದರಿಂದ ಜನರಿಗೆ ಕಾಯಬೇಕಾದ ತೊಂದರೆ ಆಗುತ್ತಿದೆ. ಈಗ ಪೂರ್ಣಪ್ರಮಾಣದ ಪಾಸ್‌ ಪೋರ್ಟ್‌ ಸೌಲಭ್ಯದ ಕಚೇರಿಯೇ ಉಡುಪಿಗೆ ಬರುತ್ತಿರುವುದರಿಂದ ಹಲವು ತೊಂದರೆ ಗಳು ನಿವಾರಣೆಯಾಗಲಿವೆ. 
ಉಡುಪಿ ಅಂಚೆ ವಿಭಾಗಕ್ಕೆ ಪಾಸ್‌ಪೋರ್ಟ್‌ ಕಚೇರಿ ತೆರೆಯುವ ಕುರಿತು ಇದು ವರೆಗೆ ದಿಲ್ಲಿಯಿಂದ ಯಾವುದೇ ಮಾಹಿತಿ ಬಂದಿಲ್ಲ. 

ಅಂಚೆ ಇಲಾಖೆ ಸಹಯೋಗದಲ್ಲಿ ಪಾಸ್‌ ಪೋರ್ಟ್‌ ಕಚೇರಿ ತೆರೆಯುವ ಮೊದಲ ಹಂತ ದಲ್ಲಿ ಇತ್ತೀಚೆಗೆ ಮೈಸೂರಿನಲ್ಲಿ ಆರಂಭಿಸ ಲಾಗಿದೆ. ಎರಡನೆಯ ಹಂತದಲ್ಲಿ ಹಾಸನ, ದಾವಣಗೆರೆ, ಬೆಳಗಾವಿ, ಕಲಬುರಗಿ ಯಲ್ಲಿ ಆರಂಭಿಸ ಲಾಗುತ್ತಿದೆ. ಮೂರನೆಯ ಹಂತದಲ್ಲಿ ಉಡುಪಿ ಯಲ್ಲಿ ಆರಂಭಿಸ ಲಾಗುವುದು. ಪಾಸ್‌ಪೋರ್ಟ್‌ ಕಚೇರಿ ತೆರೆಯಲು 1,000 ಚದರಡಿ ಕಚೇರಿ ಯನ್ನು ಪಾಸ್‌ಪೋರ್ಟ್‌ ಸೇವಾ ವಿಭಾಗ ದವರು ಕೇಳಿದ್ದಾರೆ. ಜಾಗದ ಲಭ್ಯತೆ ಬೇಕು. ಸುಮಾರು ಮೂರು ತಿಂಗಳಲ್ಲಿ ಉಡುಪಿ ಯಲ್ಲಿ ಆರಂಭಿಸ ಲಾಗುವುದು ಎಂದು ಕರ್ನಾಟಕದ ಚೀಫ್ ಪೋಸ್ಟ್‌ ಮಾಸ್ಟರ್‌ ಜನರಲ್‌ ಚಾರ್ಲ್ಸ್‌ ಲೋಬೋ “ಉದಯವಾಣಿ’ಗೆ ತಿಳಿಸಿದ್ದಾರೆ. 

ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಉಡುಪಿ ಮತ್ತು ಕುಂದಾಪುರ ತಾಲೂಕು ಮಾತ್ರ ಇದೆ. ಕಾರ್ಕಳ ತಾಲೂಕು 
ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿದೆ. ಹೀಗಿರು ವಾಗ ಕಾರ್ಕಳ ತಾಲೂಕು ಉಡುಪಿಯಲ್ಲಿ ತೆರೆ ಯುವ ಪಾಸ್‌ಪೋರ್ಟ್‌ ಕಚೇರಿ ಸೌಲಭ್ಯಕ್ಕೆ ಬರುತ್ತದೋ ಇಲ್ಲವೋ ನೋಡ ಬೇಕು. 

ಸ್ಥಳಾವಕಾಶ ನೋಡಿಕೊಂಡು ಉಡುಪಿ ಅಥವಾ ಮಣಿಪಾಲದಲ್ಲಿ ಕಚೇರಿಯನ್ನು ತೆರೆಯುವ ಸಾಧ್ಯತೆ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next