Advertisement

ಕರಿಶಿಲೀಂಧ್ರಕ್ಕೆ ಬಸವನಾಡಲ್ಲಿ ಎರಡು ಬಲಿ

06:35 PM May 19, 2021 | Suhan S |

ವಿಜಯಪುರ: ಕೋವಿಡ್ ಎರಡನೇ ಅಲೆಯ ಅಬ್ಬರದ ಮಧ್ಯೆ ಕಾಣಿಸಿಕೊಂಡಿರುವ ಕರಿ ಶಿಲೀಂಧ್ರ ರೋಗಕ್ಕೆ ವಿಜಯಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಪ್ರಕರಣಗಳಲ್ಲಿ ಸಾವು ಸಂಭವಿಸಿದ್ದು, ಒಂದು ಪ್ರಕರಣದಲ್ಲಿ ಪ್ರಯೋಗಾಲಯದ ವರದಿ ದೃಢಪಟ್ಟಿಲ್ಲ. ಆದರೆ ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗ ಜೀವ ಬಲಿ ಪಡೆದ ಖಾತೆ ಆರಂಭಿಸಿದೆ.

Advertisement

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಿಲ್ಲೆಯ ಮುದ್ದೇಬಿಹಾಳ ತಾಲೂಕ ಬಿದರಕುಂದಿ ಗ್ರಾಮದ ವ್ಯಕ್ತಿ ಕರಿ ಶಿಲೀಂಧ್ರ ರೋಗಕ್ಕೆ ಬಲಿಯಾಗಿದ್ದಾನೆ. ವಿಜಯಪುರ ಜಿಲ್ಲಾಡಳಿತ ಧಾರವಾಡ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಸಾವಿನ ನಿಖರ ಕಾರಣ ಖಚಿತಪಡಿಸಿಕೊಳ್ಳಲು ಮುಂದಾಗಿದೆ.  ನಾವು ಹುಬ್ಬಳ್ಳಿಯ ಕಿಮ್ಸ್‍ನಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದ್ದೇವೆ. ಆದರೆ ಅವರೊಂದಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ಕುರಿತು ನಿಖರ ಮಾಹಿತಿ ನೀಡಲು ಸಮಯಾವಕಾಶ ಕೇಳುತ್ತಿದ್ದಾರೆ. ಅಲ್ಲದೇ ನಿಯಮದ ಪ್ರಕಾರ ಸದರಿ ಪ್ರಕರಣದ ಕುರಿತು ಕಿಮ್ಸ್ ಆಸ್ಪತ್ರೆಯವರು ಧಾರವಾಡ ಜಿಲ್ಲಾಡಳಿತಕ್ಕೆ ಈ ಕುರಿತು ನಿಖರ ಮಾಹಿತಿ ನೀಡಲಿದ್ದಾರೆ ಎಂದು ವಿಜಯಪುರ ಜಿಲ್ಲಾಡಳಿತ ಹೇಳಿದೆ.

ಸದರಿ ಕರಿ ಶಿಲೀಂಧ್ರ ರೋಗಕ್ಕೆ ಬಲಿಯಾದ ವ್ಯಕ್ತಿಯನ್ನು  ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬೀದರಕುಂದಿ ಗ್ರಾಮಕ್ಕೆ ಸೇರಿದವನು ಎಂಬುದು ಮಾತ್ರ ಸ್ಪಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ಕಪ್ಪು ಶಿಲೀಂಧ್ರ ಪ್ರಕರಣದ ರೋಗ ಶಂಕಿತ ವ್ಯಕ್ತಿ ಪ್ರಕರಣ ಮೇ 16 ರಂದು ಬಿಎಲ್‍ಡಿಇ ಆಸ್ಪತ್ರೆಗೆ ದಾಖಲಾಗಿದ್ದು, ಮೇ 17 ರಂದು ನಿಧನರಾಗಿದ್ದಾರೆ. ಆದರೆ ಬಿಎಲ್‍ಡಿಇ ಪ್ರಕಾರ, ಇದು ಪ್ರಕರಣವನ್ನು ದೃಢೀಕರಣವಾಗಿಲ್ಲ. ಪ್ರಯೋಗಾಲಯದಲ್ಲಿ ಈ ಕುರಿತು ಪರೀಕ್ಷೆ ನಡೆಸಿಲ್ಲ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next