ಬೆಂಗಳೂರು: ಬಸ್ ಗಳಲ್ಲಿ ಪ್ರಯಾಣಿಸುವಾಗ ಬಹತೇಕರು ಮೊಬೈಲ್ ಬಳಸುವುದು ಸಾಮಾನ್ಯ. ಬಹಳಷ್ಟು ಮಂದಿ ಮೊಬೈಲ್ ನಲ್ಲಿ ಹಾಡುಗಳನ್ನು ಕೇಳುತ್ತಾ ಸಂಚಾರ ಮಾಡುತ್ತಾರೆ. ಹಲವರು ಇಯರ್ ಫೋನ್ ಗಳನ್ನು ಬಳಸಿ ಹಾಡುಗಳನ್ನು ಕೇಳಿದರೆ, ಕೆಲವರಂತೂ ಜೋರಾಗಿ ಹಾಡು ಹಾಕಿಕೊಂಡು ತಮಗೆ ಮಾತ್ರವಲ್ಲದೆ, ಎಲ್ಲಾ ಪ್ರಯಾಣಿಕರಿಗೆ ಕೇಳುವಂತೆ ಹಾಕುತ್ತಾರೆ. ಆದರೆ ಇದಕ್ಕೆ ಬ್ರೇಕ್ ಹಾಕಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚಿಸಿದೆ.
ಸಾರ್ವಜನಿಕರು ಬಸ್ಸಿನಲ್ಲಿ ಮೊಬೈಲ್ ಮೂಲಕ ಜೋರಾಗಿ ಹಾಡು, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದು ಶಬ್ದ ಮಾಲಿನ್ಯ ಮತ್ತು ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ದಾಖಲಾಗಿದೆ.
ಇದನ್ನೂ ಓದಿ:ಕ್ಯೂಟ್ ಜೋಡಿ ಮೋಡಿಗೆ ರೆಡಿ! ಟಾಮ್ ಅಂಡ್ ಜೆರ್ರಿ ಇಂದು ತೆರೆಗೆ
ಹೀಗಾಗಿ ನಿಗಮದ ಬಸ್ಸುಗಳಲ್ಲಿ ದೂರವಾಣಿಯ ಮೂಲಕ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಈ ಸಂಬಂಧ ಕರ್ತವ್ಯ ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡಬೇಕು.
ಒಂದು ವೇಳೆ ಸದರಿ ಪ್ರಯಾಣಿಕ ಮನ್ನಡೆ ನೀಡದೆ ನಿಯಮ ಉಲ್ಲಂಘಿಸಿದರೆ, ಅಂತಹವರನ್ನು ಬಸ್ ಸಿಬ್ಬಂದಿ ಬಸ್ ನಿಂದ ಇಳಿಸಬೇಕು, ಅಂತಹ ಪ್ರಯಾಣ ದರವನ್ನು ಹಿಂತಿರುಗಿಸುವಂತಿಲ್ಲ ಎಂದು ಶಿವಯೋಗಿ ಕಳಸದ ಆದೇಶಿಸಿದ್ದಾರೆ.