Advertisement

ವಿಕ್ಟೋರಿಯಾ ಸರೋವರಕ್ಕೆ ಬಿದ್ದ 49 ಪ್ರಯಾಣಿಕರನ್ನು ಹೊತ್ತ ವಿಮಾನ: 23 ಪ್ರಯಾಣಿಕರ ರಕ್ಷಣೆ

03:34 PM Nov 06, 2022 | Team Udayavani |

ತಾಂಜಾನಿಯಾ : 49 ಪ್ರಯಾಣಿಕರನ್ನು ಹೊತ್ತ ವಿಮಾನವೊಂದು ತಾಂತ್ರಿಕ ದೋಷದಿಂದ ವಿಕ್ಟೋರಿಯಾ ಸರೋವರದಲ್ಲಿ ಪತನಗೊಂಡಿದೆ.

Advertisement

ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು 23 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಸಾವಿನ ಬಗ್ಗೆ ಯಾವುದೇ ಮಾಹಿತಿ ವರದಿಯಾಗಿಲ್ಲ.

ವಿಮಾನ ನಿಲ್ದಾಣದಿಂದ 100 ಮೀಟರ್ ದೂರದಲ್ಲಿರುವ ವಿಕ್ಟೋರಿಯಾ ಸರೋವರದಲ್ಲಿ ಪತನಗೊಂಡಿದೆ” ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ವಿಲಿಯಂ ಮ್ವಾಂಪಘಲೆ ಬುಕೋಬಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಾಣಿಜ್ಯ ರಾಜಧಾನಿ ದಾರ್ ಎಸ್ ಸಲಾಮ್ ನಿಂದ ವಿಮಾನ ಟೇಕಾಫ್ ಆಗಿದೆ ಎಂದು ತಾಂಜಾನಿಯಾ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಟಿಬಿಸಿ) ತಿಳಿಸಿದೆ. ಚಂಡಮಾರುತ ಮತ್ತು ಭಾರೀ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ : ಕೇರಳ: ರಬ್ಬರ್ ಶೀಟ್ ಕದ್ದ ಕಳ್ಳ 37 ವರ್ಷಗಳ ಬಳಿಕ ಬಂಧನ!

Advertisement

 

Advertisement

Udayavani is now on Telegram. Click here to join our channel and stay updated with the latest news.

Next