Advertisement
ಭಾರತೀಯ ಸಮುದಾಯದ ಉತ್ಸವವಾದ “ಪ್ಯಾಸೆಜ್ ಟು ಇಂಡಿಯಾ 2024 (ಭಾರತದ ಪಥ 2024). ಕಾರ್ಯಕ್ರಮ ಮಾರ್ಚ್ 7 ರಿಂದ 9 ರವರೆಗೆ ಅಂದರೆ ಗುರುವಾರದಿಂದ ಶನಿವಾರದವರೆಗೆ ಇಸ್ಲಾಮಿಕ್ ಕಲೆಯ ವಸ್ತುಸಂಗ್ರಹಾಲಯದ ಉದ್ಯಾನವನದಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮವು ಕಥಾರು ವಸ್ತು ಸಂಗ್ರಹಾಲಯಗಳ ಸಹಯೋಗದಿಂದ ನೆರವೇರಲಿದೆ.
Related Articles
Advertisement
ಕತಾರಿನಲ್ಲಿನ ನೂರು ಛಾಯಾಗ್ರಹಕರ ಅದ್ಭುತ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದ್ದು ಇದು ಇನ್ನೊಂದು ಆಕರ್ಷಣೆಯಾಗಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಐಸಿಸಿಐ ಪ್ರಾಯೋಜಕರಾದ ಭಾರತ ಮೂಲದ ಕವಾಲಿ ತಂಡದ ಪ್ರದರ್ಶನ, ಕೇರಳ ಮೂಲದ ತಿರುವಿತರ ತಂಡದ ಪ್ರದರ್ಶನ, ರಾಸ್ ದಾಂಡಿಯ ಪ್ರದರ್ಶನ, ಕತಾರಿನ ಆಂತರಿಕ ಮಂತ್ರಾಲಯದ ಶ್ವಾನಗಳ ಪ್ರದರ್ಶನ, ಸಂಗೀತ ನೇರ ಕಾರ್ಯಕ್ರಮ ಹಾಗೂ ಚಂಡ ಮೇಳಗಳು ಮೊಳಗಲಿವೆ.
ಭಾರತೀಯರಿಗೆ ಪ್ರತಿಭೆ ಇದೆ ಇಂಡಿಯಾ ಹ್ಯಾಸ್ ಗಾಟ್ ಟ್ಯಾಲೆಂಟ್ ಮೂರನೇ ಆವೃತ್ತಿಯ ಅಂತಿಮ ಸುತ್ತಿನ ವಿಜೇತರು ಪಾಲ್ಗೊಳ್ಳಲಿದ್ದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಸುಪ್ರಸಿದ್ಧ ಆಶು ಚಿತ್ರಕಾರರಾದ ಶ್ರೀ ವಿಲಾಸ್ ನಾಯಕ್ ಸ್ಥಳದಲ್ಲೇ ಚಿತ್ರವನ್ನು ಬಿಡಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ 40 ಹೆಚ್ಚು ಕಾಲಾವಧಿ ಅನಿವಾಸಿ ಭಾರತೀಯರನ್ನು ಸನ್ಮಾನಿಸಲಾಗುತ್ತಿದೆ ಕೆಳಗಿನ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.1. 1983ರ ಹಿಂದಿನಿಂದ ಕತಾರಿನಲ್ಲಿ ವಾಸಿಸುತ್ತಿರುವವರು.
2. 1993ರ ಹಿಂದಿನಿಂದ ಕತಾರಿನಲ್ಲಿ ವಾಸಿಸುತ್ತಿರುವ ದಾದಿಯರು.
3. 1993ರ ಹಿಂದಿನಿಂದ ಕತಾರಿನಲ್ಲಿ ವಾಸಿಸುತ್ತಿರುವ ಸಹಾಯಕ ವರ್ಗದವರು.
ಅತಿ ಹೆಚ್ಚು ವರ್ಷಗಳಿಂದ ಕತ್ತರಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುವುದು. ಮೂರು ದಿನಗಳ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಮಾಡಲಾಗಿದೆ, ಸರ್ವರಿಗೂ ಸುಸ್ವಾಗತವನ್ನು ನೀಡಲಾಗಿದೆ. ಉಚಿತ ಸಾರಿಗೆ ವ್ಯವಸ್ಥೆಯನ್ನು ನಿಗದಿತ ಸ್ಥಳದಿಂದ ಹಾಗೂ ಸಮಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸ್ಥಳ ಹಾಗೂ ಸಮಯದ ವಿವರಗಳನ್ನು ಮಾಧ್ಯಮಗಳ ಮೂಲಕ ಕಾಲಕ್ರಮೇಣ ತಿಳಿಸಲಾಗುತ್ತದೆ. ಈ ಮಹೋನ್ನತ ಗಾತ್ರದ ಕಾರ್ಯಕ್ರಮವನ್ನು ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ನೆರವೆನಿಂದ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರವು ಪ್ರತಿನಿಧಿಸುತ್ತಿರುವ 8 ಲಕ್ಷ ಸದಸ್ಯರು ಇರುವ ಭಾರತ ಮೂಲದ ಸಮುದಾಯದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಭಾರತೀಯ ಸಾಂಸ್ಕೃತಿಕ ಕೇಂದ್ರವು ಈ ಕಾರ್ಯಕ್ರಮವನ್ನು ಹೆಚ್ಚಿನ ರೀತಿಯಲ್ಲಿ ಯಶಸ್ವಿಗೊಳಿಸಲು ಹಾಗೂ ಸವಿ ನೆನಪಿನ ಅಂಗಳದಲ್ಲಿ ಇರಿಸಲು ಸತತ ಪ್ರಯತ್ನದಲ್ಲಿದ್ದು ಭಾರತ ಹಾಗೂ ಕತಾರಿನ ನಡೋಣ ಸ್ನೇಹ ಹಾಗೂ ಬಾಂಧವ್ಯವನ್ನುಸುಭದ್ರ ಗುಡಿಸಲು ಸಮಸ್ತ ಕೊಡುಗೆಯನ್ನು ಅರ್ಪಿಸುತ್ತಿದೆ. 2012ರಲ್ಲಿ ಪ್ರಾರಂಭವಾದ ಪ್ಯಾಸೇಜ ಟು ಇಂಡಿಯಾ ಕಾರ್ಯಕ್ರಮವು ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಸಂವತ್ಸರವು ಒಂದು ಹಬ್ಬದಂತೆ ಕತಾರಿನಲ್ಲಿನ ಭಾರತೀಯ ಸಮುದಾಯವೂ ಈ ಕಾರ್ಯಕ್ರಮವನ್ನು ಆಚರಿಸುತ್ತಿದ್ದು ಭಾರತದ ಪರಂಪರೆ ಹಾಗೂ ಕತಾರಿನ ಸಾಮರಸ್ಯವನ್ನು ಪ್ರತಿಬಿಂಬಿಸುತ್ತಿದೆ. ಸಭೆಯಲ್ಲಿ ಉಪಸ್ಥಿತರು: ಕತಾರ್ ದೇಶಕ್ಕೆ ಭಾರತದ ರಾಯಭಾರಿಗಳಾದ ಘನವೆತ್ತ ಶ್ರೀ ವಿಪುಲ್ ಅವರು, ಕತಾರಿನ ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿಗಳಾದ ಶ್ರೀ ಸಚಿನ್ ದಿನಕರ್ ಶಂಕಪಾಲ್ ಅವರು, ಭಾರತೀಯ ದೂತಾವಾಸದ ದ್ವಿತೀಯ ಕಾರ್ಯದರ್ಶಿಯಾದ ಶ್ರೀಮತಿ ಬಿಂದು ನಾಯರ್ ಅವರು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಪಿ ಮಣಿಕಂಠನ್ ಅವರು, ಪ್ಯಾಸೇಜ್ ಟು ಇಂಡಿಯಾ 2024 ಆಯೋಜನ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ಎನ್ ಬಾಬು ರಾಜನ್ ಅವರು ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಕರ್ನಾಟಕ ಮೂಲದವರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಉಪಸ್ಥಿತರಿದ್ದರು.