Advertisement

ಸಚಿವ ನಿರಾಣಿ ವಿರುದ್ಧ ಪಾಷಾ ಸಿಡಿ ಆರೋಪ : ಸಿಬಿಐ ತನಿಖೆಗೆ ಯತ್ನಾಳ್ ಆಗ್ರಹ

03:22 PM Jul 20, 2021 | Team Udayavani |

ವಿಜಯಪುರ : ಗಣಿ ಸಚಿವ ಮುರುಗೇಶ ನಿರಾಣಿ ಬಳಿ 1000 ಸಿಡಿ ಇವೆ ಎಂದು ಆಲಂ ಪಾಷಾ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದೆ. ಕಾರಣ ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿ.ಡಿ. ವಿಚಾರವಾಗಿ ಗಂಭೀರ ಆರೋಪವಿದ್ದರೆ ಅದರಿಂದ ತನಿಖೆ ನಡೆಸಿ, ಆರೋಪ ಮುಕ್ತರಾಬೇಕು. ಇಲ್ಲವಾದರೆ ಸಚಿವ ಸ್ಥಾನದಲ್ಲಿ ಇರಲು ಹಾಗೂ ಸಿಎಂ ಹುದ್ದೆಗಾಗಿ ದೊಡ್ಡ ಪ್ರಮಾಣದಲ್ಲಿ ಅಮೀಷ ಒಡ್ಡಿದ್ದಕ್ಕೆ, ಪದೇ ಪದೆ ದೆಹಲಿಗೆ ಓಡಾಡುವ ಕುರಿತು ಮಾಹಿತಿ ಇದೆ. ಪಂಚಮಸಾಲಿ 2-ಎ ಮೀಸಲು ಹೋರಾಟ ಅಸ್ಥಿರಗೊಳಿಸಿ, ಹೋರಾಟ ವಿಫಲಗೊಳಿಸಲು ಸಚಿವ ನಿರಾಣಿ ಪ್ರಯತ್ನ ಮಾಡಿದ್ದರು. ಇದು ನಾಡಿನ ಜನತೆಗೆ ಗೊತ್ತಿದೆ. ಹೀಗಾಗಿ ಸಿ.ಎಂ. ಪಾರದರ್ಶಕ ತನಿಖೆಗಾಗಿ ಸಿಬಿಐ ಸಂಸ್ಥೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಮುರುಗೇಶ ನಿರಾಣಿ ಸೌಹಾರ್ಧ ಸಹಕಾರಿ ಹೆಸರಲ್ಲಿ ಮೋಸವಾಗಿದೆ 40 ಕೋಟಿ ರೂ. ಹಗರಣವಿದೆ. ಈಗ ಸೌಹಾರ್ಧ ಸಹಕಾರಿ ನನ್ನದಲ್ಲ ಎಂದು ಕೋರ್ಟ್ ನಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾಗಿ ಹೇಳುತ್ತಾರೆ. ನಿಮ್ಮ ಹೆಸರಲ್ಲಿ ಸೌಹಾರ್ಧ ಸಹಕಾರಿ ಬೇಡವೆಂದು ನಿರಾಣಿಗೆ ಹಿಂದೆಯೇ ಹೇಳಿದ್ದೆ. ಆಗ ನನ್ನ ಮಾತು ಕೇಳಲಿಲ್ಲ, ಜಿಲ್ಲೆಯ ಜನರು ಮುರುಗೇಶ ನಿರಾಣಿ ಹೆಸರನ್ನು ನಂಬಿ ಹಣ ಇಟ್ಟಿದ್ದರು. ಸುಮಾರು 40 ಕೋಟಿ ರೂ. ಹಗರಣವಾಗಿದೆ. ಹಗರಣ ಹೊರ ಬರುತ್ತಲೇ ಇದು‌ ನನ್ನದಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಸಚಿವ ನಿರಾಣಿ ವಿರುದ್ದ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next