Advertisement

Paryaya:ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವ: ಪುತ್ತಿಗೆ ಶ್ರೀ ಭೇಟಿ, ಭಕ್ತರಿಂದ ತುಲಾಭಾರ ಸೇವೆ

03:15 PM Jan 16, 2024 | Team Udayavani |

ಕಾಪು: ಉಡುಪಿ ಶ್ರೀ ಕೃಷ್ಣ ಮಠದ ಭಾವೀ ಪರ್ಯಾಯ ಪೀಠಾಧಿಪತಿ, ನಾಲ್ಕನೇ ಬಾರಿಗೆ ಯಪೀಠಾರೋಹಣಗೈಯ್ಯಲಿರುವ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ರವಿವಾರ ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿದರು.

Advertisement

ಪರ್ಯಾಯ ಪೂರ್ವದಲ್ಲಿ ಶ್ರೀ ಜನಾರ್ದನ ದೇಗುಲಕ್ಕೆ ಭೇಟಿ ನೀಡಿದ ಪುತ್ತಿಗೆ ಶ್ರೀಗಳನ್ನು ಕಾಪು ಸಾವಿರ ಸೀಮೆಯ ಭಗವದ್ಭಕ್ತರು ಸ್ವಾಗತಿಸಿ, ಪಾದಪೂಜೆ ಸಹಿತವಾಗಿ ಮಹಾಮಂಗಳಾರತಿ ಬೆಳಗಿದರು. ಬಳಿಕ ದೇಗುಲದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್‌ ಕೆ.ಪಿ. ಶ್ರೀನಿವಾಸ ತಂತ್ರಿ ಹಾಗೂ ಭಕ್ತಾದಿಗಳ ವತಿಯಿಂದ ನಾಣ್ಯ, ಅಕ್ಕಿ ಸಹಿತವಾಗಿ ಧಾನ್ಯ ವಸ್ತುಗಳೊಂದಿಗೆ ತುಲಾಭಾರ ನೆರವೇರಿಸಲಾಯಿತು.

ಈ ಸಂದರ್ಭ ಆಶೀರ್ವಚನ ನೀಡಿದ ಅವರು ಉಡುಪಿ ಪರ್ಯಾಯಕ್ಕೂ ಕಾಪುವಿಗೂ ಅವಿನಾಭಾವವಾದ ಸಂಬಂಧ ವಿದೆ. ತಮ್ಮ ಪರ್ಯಾಯಕ್ಕೆ ಪ್ರತೀ ವರ್ಷವೂ ಕಾಪುವಿನ ಬಹಳಷ್ಟು ಭಕ್ತರು, ಅಭಿಮಾನಿಗಳು ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಈ ಬಾರಿಯ ಚತುರ್ಥ ಪರ್ಯಾಯಕ್ಕೂ ಕಾಪುವಿನ ಮಹಾಜನತೆ ಆಗಮಿಸಿ, ಪರ್ಯಾಯದುದ್ದಕ್ಕೂ ಕೃಷ್ಣ ಸೇವೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.

ಕಾಪು ತಹಶೀಲ್ದಾರ್‌ ಡಾ| ಪ್ರತಿಭಾ ಆರ್‌., ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರುಣ್‌
ಕುಮಾರ್‌ ಬಿ.ಕೆ., ಗೌರವ ಸಲಹೆಗಾರ ಕೆ.ಪಿ.ಆಚಾರ್ಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಮಾಜಿ ಆಡಳಿತ
ಮೊಕ್ತೇಸರ ಮೋಹನ್‌ ಬಂಗೇರ ಕಾಪು,ಅರ್ಚಕರಾದ ವೇ| ಮೂ| ನಾರಾಯಣ ತಂತ್ರಿ, ವೇ| ಮೂ| ಜನಾರ್ದನ ತಂತ್ರಿ, ಕಾಪು
ಬೀಡು ಅನಿಲ್‌ ಬಲ್ಲಾಳ್‌, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್‌ ಹೆಗ್ಡೆ ಕಲ್ಯ, ಕಾಪು ಕಾಳಿಕಾಂಬಾ
ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ಕಾಪು ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್‌
ಜಿ. ಶೆಣೈ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾಮಕೃಷ್ಣ ತಂತ್ರಿ, ಪ್ರಮುಖರಾದ ಸದಾಶಿವ ಭಟ್‌, ಮನೋಹರ ಶೆಟ್ಟಿ ಕಾಪು, ಸಖೇಂದ್ರ ಸುವರ್ಣ, ರಘುರಾಮ ಶೆಟ್ಟಿ, ಯೋಗೀಶ್‌ ಕೋಟ್ಯಾನ್‌, ದೇಗುಲದ ಪ್ರಬಂಧಕ ದಿವಾಕರ್‌ ಕಾಪು, ಸಿಬಂದಿಗಳಾದ ರಾಧಾಕೃಷ್ಣ ಕಲ್ಲೂರಾಯ, ಲಕ್ಷ್ಮಿ¾ಕಾಂತ್‌ ದೇವಾಡಿಗ ಉಪಸ್ಥಿತರಿದ್ದರು. ಕಾಪು ಬಿಲ್ಲವರ ಸಹಾಯಕ ಸಂಘದ ಮಹಿಳಾ ಘಟಕದ ಸದಸ್ಯರು ಪುತ್ತಿಗೆ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next