Advertisement

ಎಂ.ಬಿ.ಪಾಟೀಲ್‌ಗೆ ಪರ್ಯಾವರಣ ಪ್ರಶಸ್ತಿ

10:42 PM Jan 13, 2020 | Lakshmi GovindaRaj |

ವಿಜಯಪುರ: ರಾಜ್ಯದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಜಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಗಾಗಿ ಕೋಟಿ ವೃಕ್ಷ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಬಬಲೇಶ್ವರ ಶಾಸಕ, ಮಾಜಿ ಸಚಿವ ಎಂ.ಬಿ. ಪಾಟೀಲ ಅವರಿಗೆ ರಾಜಸ್ಥಾನ ರಾಜ್ಯದ ತರುಣ್‌ ಭಾರತ ಸಂಘದ ಪರ್ಯಾವರಣ ಪ್ರಶಸ್ತಿ ಲಭಿಸಿದೆ. ಎಂ.ಬಿ. ಪಾಟೀಲ ಅವರು ಪರಿಸರ ರಕ್ಷಣೆಯಲ್ಲಿ ಕೈಗೊಂಡಿರುವ ವಿವಿಧ ಕಾರ್ಯ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.

Advertisement

ಜಲಗಾಂಧಿ ಎಂದೆ ಖ್ಯಾತರಾದ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ| ರಾಜೇಂದ್ರಸಿಂಗ್‌ ಸ್ಥಾಪಿಸಿದ ತರುಣ್‌ ಭಾರತ ಸಂಘ ಈ ಪ್ರಶಸ್ತಿ ನೀಡಿದೆ. ಮಕರ ಸಂಕ್ರಮಣ ದಿನವಾದ ಜ.15ರಂದು ರಾಜಸ್ಥಾನದ ತರುಣ್‌ ಭಾರತ ಸಂಘದಲ್ಲಿ ನಡೆಯುವ ಸಮಾರಂಭದಲ್ಲಿ ಮಹಾತ್ಮ ಗಾಂ ಧೀಜಿ ಅವರ ಮೊಮ್ಮಗ ಅರುಣ ಗಾಂಧೀಜಿ  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next