Advertisement

ಪಾರ್ವತಮ್ಮ ರಾಜಕುಮಾರ್‌ ಪ್ರಥಮ ಪುಣ್ಯಸ್ಮರಣೆ ಇಂದು

10:59 AM May 31, 2018 | Team Udayavani |

ಬೆಂಗಳೂರು: ಪಾರ್ವತಮ್ಮ ರಾಜಕುಮಾರ್‌ ಅವರ ಪ್ರಥಮ ಪುಣ್ಯ ಸ್ಮರಣೆ ಗುರುವಾರ (ಮಾ.31)ರಂದು ನಡೆಯಲಿದೆ. ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಪಾರ್ವತಮ್ಮ ಅವರ ಸಮಾಧಿ ಬಳಿ ನಡೆಯಲಿರುವ ಪೂಜೆಯಲ್ಲಿ ಪುತ್ರರಾದ ಶಿವರಾಜಕುಮಾರ್‌, ರಾಘವೇಂದ್ರ ರಾಜ ಕುಮಾರ್‌ ಮತ್ತು ಪುನೀತ್‌ರಾಜ ಕುಮಾರ್‌ ಸೇರಿದಂತೆ ರಾಜ್‌ ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ.

Advertisement

ನಂತರ ಸದಾಶಿವನಗರದಲ್ಲಿರುವ ಮನೆಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ ಮೇ 31ರಂದು ಪಾರ್ವತಮ್ಮ ರಾಜಕುಮಾರ್‌ ನಿಧನರಾಗಿದ್ದರು. ಬಳಿಕ ಕಂಠೀರವ ಸ್ಟುಡಿಯೋದಲ್ಲೇ ಪಾರ್ವತಮ್ಮನವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಡಾ.ರಾಜ್‌ಕುಮಾರ್‌ ಅವರ ಸ್ಮಾರಕದ ಪಕ್ಕದಲ್ಲೇ ಪಾರ್ವತಮ್ಮನವರ ಅಂತ್ಯಕ್ರಿಯೆ ನಡೆದಿತ್ತು

Advertisement

Udayavani is now on Telegram. Click here to join our channel and stay updated with the latest news.

Next