Advertisement

16, 17ರಂದು “ಪರ್ವ’ಮಹಾ ರಂಗಪ್ರಯೋಗ

01:29 PM Apr 01, 2022 | Team Udayavani |

ಬೆಳಗಾವಿ: ಪರ್ವ ಮಹಾ ರಂಗಪ್ರಯೋಗ ನಾಟಕ ಪ್ರದರ್ಶನ ನಗರದ ಕೋನವಾಳಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಏ. 16 ಹಾಗೂ 17ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ರಂಗಪ್ರಯೋಗ ”ಪರ್ವ” ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ರಾಷ್ಟ್ರದ ಐದು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗೊಳ್ಳಬೇಕು ಎಂಬ ಯೋಜನೆಯನ್ನು ರಂಗಾಯಣ ರೂಪಿಸಿದೆ. ಸುಮಾರು ಎಂಟು ಗಂಟೆ ಸುದೀರ್ಘ‌ ಅವಧಿಯ ಪರ್ವ ಮಹಾ ರಂಗಪ್ರಯೋಗ ನಾಟಕ ಮಧ್ಯಾಹ್ನ 3:30 ಗಂಟೆಯಿಂದ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.

ಡಾ. ಎಸ್‌.ಎಲ್‌. ಭೈರಪ್ಪನವರ ಕಾದಂಬರಿ ಆಧಾರಿತ ನಾಟಕ ಪ್ರದರ್ಶನ ಇದಾಗಿದೆ. ಮಹಾಭಾರತವನ್ನು ವೈಚಾರಿಕ ದೃಷ್ಟಿಯೊಂದಿಗೆ ಕಟ್ಟಿಕೊಟ್ಟ ಈ ಕಾದಂಬರಿ ವಿಶ್ವದ ಅನೇಕ ವಿದೇಶಿ ಭಾಷೆಗಳಿಗೂ ಅನುವಾದಗೊಂಡಿದ್ದು, ಜನಮನ್ನಣೆ ಪಡೆದಿದೆ. ಕನ್ನಡ ಕಾಯಕ ವರ್ಷದ ಈ ಸಂದರ್ಭದಲ್ಲಿ ಮೈಸೂರು ರಂಗಾಯಣ ವತಿಯಿಂದ ”ಪರ್ವ” ಮಹಾ ರಂಗಪ್ರಯೋಗದ ಮೂಲಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಾಟಕ 20 ಪ್ರದರ್ಶನ ಕಂಡಿದೆ ಎಂದು ತಿಳಿಸಿದರು.

600 ಪುಟಗಳ ಬೃಹತ್‌ ಕಾದಂಬರಿಯನ್ನು ರಂಗ ಪ್ರಯೋಗಕ್ಕೆ ಅಳವಡಿಸುವುದು ಸವಾಲಿನ ಕೆಲಸವಾಗಿತ್ತು. ಇದನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ನಾಟಕ ಪ್ರದರ್ಶನದಲ್ಲಿ ಸುಮಾರು 40ರಿಂದ 50 ಕಲಾವಿದರು ಭಾಗವಹಿಸಲಿದ್ದು, ಪ್ರಕಾಶ ಬೆಳವಾಡಿ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 3.30 ಗಂಟೆಗೆ ಪ್ರಾರಂಭವಾಗಿ ಸುಮಾರು 8 ಗಂಟೆಗಳ ಕಾಲ ನಾಟಕ ಪ್ರದರ್ಶನಗೊಳ್ಳಲಿದ್ದು, 4 ಬಾರಿ ವಿರಾಮ ಹಾಗೂ 30 ನಿಮಿಷ ಊಟಕ್ಕೆ ವಿರಾಮ ಇರಲಿದೆ. ಪರ್ವ ಮಹಾ ರಂಗಪ್ರಯೋಗ ದೊಡ್ಡ ಪ್ರಮಾಣ ಮತ್ತು ದೀರ್ಘ‌ಕಾಲ ಪ್ರದರ್ಶನ ಇರುವುದರಿಂದ ರೂಪಾಯಿ 200 ಟಿಕೆಟ್‌ ಬೆಲೆ ನಿಗದಿಪಡಿಸಲಾಗಿದೆ. ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಟಿಕೆಟ್‌ ಗಳು ಲಭ್ಯವಿರುತ್ತವೆ ಮತ್ತು ರಂಗಾಯಣ ವೆಬ್‌ ಸೆ„ಟ್‌ನಲ್ಲಿ ಆನ್‌ ಲೆ„ನ್‌ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು.

Advertisement

ಇದಕ್ಕೂ ಮುಂಚೆ ನಗರದ ಕಟ್ಟಿಮನಿ ಸಭಾಂಗಣದಲ್ಲಿ ಪರ್ವ ನಾಟಕ ಪ್ರದರ್ಶನ ಕುರಿತು ಮೈಸೂರು ರಂಗಾಯಣದಿಂದ ಪೂರ್ವ ಸಿದ್ಧತೆ ಕುರಿತು ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ನಾಟಕ ಪ್ರದರ್ಶನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹಿರಿಯ ಸಾಹಿತಿಗಳಾದ ಸರಜು ಕಾಡ್ಕರ್‌, ಅಶೋಕ ಚಂದರಗಿ, ಅರವಿಂದ ಕುಲಕರ್ಣಿ, ಆರ್‌.ಬಿ ಕಟ್ಟಿ, ಪ್ರಿಯಾ ಪುರಾಣಿಕ, ರೇಖಾ ಶಿರಗಾವಕರ ತಿಳಿಸಿದರು. ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next