Advertisement
ಪ್ರಮುಖ ನಾಲ್ಕು ಧರ್ಮಗಳಾದ ಕ್ರೈಸ್ತ ಧರ್ಮದ ಕುರಿತಾಗಿ ನಾರಾವಿ ಸಂತ ಅಂತೋನಿ ಮಹಾವಿದ್ಯಾಲಯದ ಪ್ರಾಂಶುಪಾಲ ಫಾ| ಅರುಣ್ ವಿಲ್ಸನ್ ಲೋಬೋ, ಹಿಂದೂ ಧರ್ಮದ ಕುರಿತಾಗಿ ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ| ಎ. ಕೃಷ್ಣಪ್ಪ ಪೂಜಾರಿ, ಇಸ್ಲಾಂ ಧರ್ಮದ ಕುರಿತಾಗಿ ತಾ| ಸುನ್ನೀ ಸಂಯುಕ್ತ ಜಮಾಅತ್ ಮಾಧ್ಯಮ ಕಾರ್ಯದರ್ಶಿ ಅಚ್ಚು ಮುಂಡಾಜೆ, ಜೈನ ದರ್ಮದ ಕುರಿತಾಗಿ ಜೈನ ವಿದ್ವಾಂಸ ಮುನಿರಾಜ ರೆಂಜಾಳ ಅವರು ಧರ್ಮ ಸಂದೇಶ ಸೂಕ್ಷ್ಮತೆಯನ್ನು ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಪರುಷಗುಡ್ಡೆ ಜೈನ್ ಮಿಲನ್ ಅಧ್ಯಕ್ಷ ವಜ್ರಕುಮಾರ್ ಅಜ್ರಿ ಸ್ವಾಗತಿಸಿದರು. ಹಿರಿಯರಾದ ಗುಣಪಾಲ ಪೂವಣಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಎಪಿಎಂಸಿ ಚುನಾವಣೆಯಲ್ಲಿ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾದ ಜೀವಂಧರ್ ಕುಮಾರ್ ನಾರಾವಿ, ವರ್ತಕರ ಕ್ಷೇತ್ರದಿಂದ ಚುನಾಯಿತರಾದ ಪುಷ್ಪರಾಜ್ ಹೆಗ್ಡೆ ಮಡಂತ್ಯಾರು ಅವರನ್ನು ಸಮ್ಮಾನಿಸಲಾಯಿತು. ವಿಶೇಷ ಉಪನ್ಯಾಸಕ್ಕಾಗಿ ಆಗಮಿಸಿದ್ದ ನಾಲ್ಕೂ ಧರ್ಮದ ಪ್ರತಿನಿಧಿಗಳನ್ನೂ ಈ ಸಂದರ್ಭ ಗೌರವಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ಸಂಯೋಜಿಸಿದರು. ವಲಯ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭ ಕೋರಿದರು. ಭಾರತಿ ಅಶೋಕ್ ಬಲ್ಲಾಳ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಅಶೋಕ್ ಕುಮಾರ್ ಜೈನ್ ವಂದಿಸಿದರು.