Advertisement

ದೇವೇಂದ್ರ ಫಡ್ನವೀಸ್ ಬೆನ್ನಿಗೆ ನಿಂತ ಬಿಜೆಪಿ ; ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ಶೀಘ್ರ?

09:28 AM Nov 06, 2019 | Team Udayavani |

ಮುಂಬಯಿ: ಮಹಾರಾಷ್ಟ್ರದ ರಾಜಕೀಯ ಕುತೂಹಲದ ಕಣಜವಾಗಿದೆ. ಒಂದೆಡೆ ಸರಕಾರ ರಚನೆಯ ವಿಚಾರದಲ್ಲಿ ತನ್ನ ನಿಲುವನ್ನು ಬಹಿರಂಗಗೊಳಿಸದೇ ಶಿವಸೇನೆ ಸತಾಯಿಸುತ್ತಿದ್ದರೆ, ಇನ್ನೊಂದೆಡೆ ಮೈತ್ರಿ ಚೆಂಡು ಶಿವಸೇನೆಯ ಅಂಗಳದಲ್ಲಿದೆ ಎಂದು ಬಿಜೆಪಿ ಮುಗುಮ್ಮಾಗಿ ಕುಳಿತುಬಿಟ್ಟಿದೆ. ಮತ್ತೊಂದೆಡೆ ಮಹಾರಾಷ್ಟ್ರದ ಜನತೆ ನಮಗೆ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಲು ಜನಾದೇಶ ಕೊಟ್ಟಿದ್ದಾರೆ ಎಂದು ಎನ್.ಸಿ.ಪಿ.ಯ ಶರದ್ ಪವಾರ್ ಹೇಳುತ್ತಿದ್ದಾರೆ. ಕಾಂಗ್ರೆಸ್ ಏನು ಮಾಡಬೇಕೆಂದು ತೋಚದೆ ತನ್ನ ಮಿತ್ರ ಪಕ್ಷ ಎನ್.ಸಿ.ಪಿ.ಗೆ ಎಲ್ಲವನ್ನೂ ಬಿಟ್ಟುಬಿಟ್ಟಂತಿದೆ.

Advertisement

ಇತ್ತ ಸರಕಾರ ರಚನೆಗೆ ಸಂಬಂಧಿಸಿದಂತೆ ಶಿವಸೇನೆ ಬಿಜೆಪಿಯೊಂದಿಗೆ ಮಾತುಕತೆಯನ್ನು ನಿಲ್ಲಿಸಿಬಿಟ್ಟಿದೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ ಮತ್ತು ಅದು ತನ್ನ ಪ್ಲ್ಯಾನ್ ಬಿ ಯನ್ನು ಜಾರಿಗೊಳಿಸುತ್ತಿದೆ ಎಂಬ ಮಾಹಿತಿಯೂ ಲಭಿಸಿದೆ. ಇದಕ್ಕೆ ಪೂರಕವಾಗಿ ಬಿಜೆಪಿಯೂ ಇದೇ ಧ್ವನಿಯಲ್ಲಿ ಮಾತನಾಡಿದ್ದು, ‘ಶಿವಸೇನೆಯಿಂದ ಯಾವುದೇ ಪ್ರಸ್ತಾಪಗಳು ನಮಗೆ ಇದುವೆರೆಗೂ ಬಂದಿಲ್ಲ, ಒಂದುವೇಳೆ ಪ್ರಸ್ತಾಪ ಬಂದರೆ ನಾವು ಅದರ ಕುರಿತು ಚರ್ಚಿಸುತ್ತೇವೆ’ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪಾಟೀಲ್ ಅವರು ಈ ಮಾತನ್ನು ಹೇಳಿದರು. ‘ನಾವು 24 ಗಂಟೆಯೂ ಮಾತುಕತೆಗೆ ಲಭ್ಯರಿದ್ದೇವೆ. ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲೇ ಮೈತ್ರಿ ಸರಕಾರವನ್ನು ನಾವು ರಚಿಸಲಿದ್ದೇವೆ’ ಎಂಬ ಮಾತನ್ನೂ ಸಹ ಚಂದ್ರಕಾಂತ್ ಪಾಟೀಲ್ ಇದೇ ಸಂದರ್ಭದಲ್ಲಿ ಹೇಳಿದರು.

ಇದೇ ಮಾತನ್ನು ಹಿರಿಯ ಬಿಜೆಪಿ ನಾಯಕ ಮತ್ತು ಹಣಕಾಸು ಸಚಿವ ಸುಧೀರ್ ಮಂಗಟಿವಾರ್ ಅವರೂ ಸಹ ಹೇಳಿದ್ದು, ‘ದೇವೇಂದ್ರ ಫಡ್ನವೀಸ್ ಅವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಹಾಗೂ ಬಿಜೆಪಿ ಮುಂದಿನ ಸರಕಾರವನ್ನು ರಚಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next