Advertisement

ಪಕ್ಷಿಕೆರೆ ರಿಕ್ಷಾ ಪಾರ್ಕ್‌ ಉದ್ಘಾಟನೆ 

11:34 AM Jan 08, 2018 | Team Udayavani |

ಪಕ್ಷಿಕೆರೆ: ರಿಕ್ಷಾಚಾಲಕರು ಶ್ರಮಜೀವಿಗಳು, ಅವರ ಜೀವನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಸಿದ್ದಪಡಿಸಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು. ಅವರು ಪಕ್ಷಿಕೆರೆಯ ಚರ್ಚ್‌ ಸ್ಟಾಪ್‌ ರಿಕ್ಷಾ ಪಾರ್ಕ್‌ನಲ್ಲಿ 2 ಲಕ್ಷ ರೂ. ನಿರ್ಮಾಣಗೊಂಡ ರಿಕ್ಷಾಪಾರ್ಕ್‌ ಮೇಲ್ಛಾವಣಿ ಉದ್ಘಾಟಿಸಿ, ಮಾತನಾಡಿದರು.

Advertisement

ಮೂಲ್ಕಿ – ಮೂಡಬಿದಿರೆ ಕ್ಷೇತ್ರದಲ್ಲಿ ಈಗಾಗಲೇ 15 ಕ್ಕೂ ಮಿಕ್ಕಿ ಪಾರ್ಕ್‌ ತಗಡು ಚಪ್ಪರ ವ್ಯವಸ್ಥೆ ಆಗಿದೆ ಇನ್ನೂ ಹಲವು ರಿಕ್ಷಾ ಪಾರ್ಕ್‌ ನಿರ್ಮಾಣ ಮಾಡಲಾಗುವುದು. ಇಲ್ಲಿನ ರಿಕ್ಷಾ ಪಾರ್ಕ್‌ ಶುದ್ಧ ಕುಡಿಯುವ ನೀರಿನ ಘಟಕ, ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಹತ್ತಿರದಲ್ಲಿ ಹೈಮಾಸ್ಟ್‌ ದೀಪ ಹಾಕಲಾಗುವುದು ಎಂದರು.

ಕೆಮ್ರಾಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ನಾಗೇಶ್‌ ಬೊಳ್ಳೂರು, ಕಾಂಗ್ರೆಸ್‌ಮುಖಂಡ ಗುರುರಾಜ ಎಸ್‌ ಪೂಜಾರಿ, ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ರಿರ್ಚ್‌ಡ್‌ ಡಿ’ಸೋಜಾ, ಪಕ್ಷಿಕೆರೆ ಅತ್ತೂರು ಕಾಪಿಕಾಡು ಕೋರªಬ್ಬು ದೈವಸ್ಥಾನದ ಶೀನ ಸ್ವಾಮಿ, ಶ್ಯಾಮರಾಯ ಶೆಟ್ಟಿ ಗೋಳಿದಡಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಕಾಂಗ್ರೆಸ್‌ ಮುಖಂಡ ಗುಲಾಂ ಮೊಹಮ್ಮದ್‌, ರಿಕ್ಷಾಚಾಲಕ ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಮೊದಲಾದವರು ಉಪಸ್ಥಿತರಿದ್ದರು. ಕರಾವಳಿ ಪ್ರಾಧಿಕಾರದ ಸದಸ್ಯ ಸಾಹುಲ್‌ ಹಮೀದ್‌ ಪ್ರಸ್ತಾವನೆಗೈದು,  ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next